Kampli : ಎಸ್ಸಿ, ಎಸ್ಟಿ ಉಪವಿಭಾಗ ಮಟ್ಟದ ಜಾಗೃತಿ ಸಮಿತಿಗೆ ಮನೋಜ್ ಕುಮಾರ್, ಕಾಟಂ ರಾಜ್ ನೇಮಕ


 ಎಸ್ಸಿ, ಎಸ್ಟಿ ಉಪವಿಭಾಗ ಮಟ್ಟದ ಜಾಗೃತಿ ಸಮಿತಿಗೆ ಮನೋಜ್ ಕುಮಾರ್, ಕಾಟಂ ರಾಜ್ ನೇಮಕ

ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ 1995ರ ಅನುಷ್ಟಾನ, ಪ್ರಕರಣಗಳ ವಿಚಾರಣೆ, ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆ ಮಾಡುವ ಬಳ್ಳಾರಿ ಉಪವಿಭಾಗ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಗೆ ಇಬ್ಬರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕಂಪ್ಲಿಯ ವಕೀಲ ಮನೋಜ್ ಕುಮಾರ್ ದಾನಪ್ಪ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ಚಿಕ್ಕಜಾಯಿಗನೂರು ಗ್ರಾಮದ ಜೆ. ಕಾಟಂ ರಾಜ್ ಅವರನ್ನು ನೇಮಕ ಮಾಡಿ, ಸಹಾಯಕ ಆಯುಕ್ತರು ಬಳ್ಳಾರಿರವರು ಆದೇಶ ಹೊರಡಿಸಿದ್ದಾರೆ.

ಈ ಸಮಿತಿಯ ಮುಖ್ಯ ಜವಾಬ್ದಾರಿಗಳು ದೌರ್ಜನ್ಯ ನಿಯಂತ್ರಣ ಕಾಯ್ದೆಯ ಅನುಷ್ಟಾನ, ದಾಖಲಾಗುವ ಪ್ರಕರಣಗಳ ವಿಚಾರಣೆ ಮೇಲ್ವಿಚಾರಣೆ, ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಹಾಗೂ ಪುನರ್ವಸತಿ ಕ್ರಮಗಳನ್ನು ಜಾರಿಗೆ ತರುವುದಾಗಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">