Kampli : ಉಪ್ಪಾರಹಳ್ಳಿಯ ಹಳ್ಳದಲ್ಲಿ ಈಜಲು ಹೋದ ಬಾಲಕ ಮೃತ

ಉಪ್ಪಾರಹಳ್ಳಿಯ ಹಳ್ಳದಲ್ಲಿ ಈಜಲು ಹೋದ ಬಾಲಕ ಮೃತ

ಕಂಪ್ಲಿ ತಾಲೂಕು ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.ಗ್ರಾಮದ 12 ವರ್ಷದ ಟಿ. ಹುಲ್ಲೇಶ್ ಎಂಬ ಬಾಲಕ ಅ.11,ಶನಿವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಶಾಲೆ ರಜೆ ಇರೋದ್ರಿಂದ ಹಳ್ಳದಲ್ಲಿ ಈಜಲು ಹೋಗಿದ್ದಾನೆ, ಈಜಲು ಹೋದ ಬಾಲಕ ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದು, ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಘಟನೆಯ ಕುರಿತು ಕಂಪ್ಲಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.ಗ್ರಾಮದಲ್ಲಿ ಈ ದುರ್ಘಟನೆ ನಡೆದ ಹಿನ್ನೆಲೆಯಲ್ಲಿ ದುಃಖದ ವಾತಾವರಣ ಉಂಟಾಗಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">