Kampli : ಗಿನ್ನಿಸ್ ವಿಶ್ವ ದಾಖಲೆ ಕುಚಿಪುಡಿ ನೃತ್ಯ ಪ್ರಯತ್ನದಲ್ಲಿ ಬೆಳಗೋಡು ವಂದನಾಗೆ ದ್ವಿತೀಯ ಬಹುಮಾನ

ಗಿನ್ನಿಸ್ ವಿಶ್ವ ದಾಖಲೆ ಕುಚಿಪುಡಿ ನೃತ್ಯ ಪ್ರಯತ್ನದಲ್ಲಿ ವಂದನಾಗೆ ದ್ವಿತೀಯ ಬಹುಮಾನ

ಜಿಲ್ಲೆ–ತಾಲೂಕಿಗೆ ಕೀರ್ತಿ ತಂದ ಬಳ್ಳಾರಿಯ ವಂದನಾ

ಕಂಪ್ಲಿ: ಹೈದರಾಬಾದ್‌ನ ಗಾಚಿಬೌಲಿ ಸ್ಟೇಡಿಯಂನಲ್ಲಿ ಡಿಸೆಂಬರ್ 27ರಂದು ಭಾರತ್ ಆರ್ಟ್ಸ್ ವತಿಯಿಂದ ಆಯೋಜಿಸಲಾದ ಕುಚಿಪುಡಿ ನೃತ್ಯದ ಗಿನ್ನಿಸ್ ವಿಶ್ವ ದಾಖಲೆ ಪ್ರಯತ್ನ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಬೆಳಗೋಡಾಳ್ ಗ್ರಾಮದ ವಂದನಾ (ದುರುಗಪ್ಪ) ಅವರು ದ್ವಿತೀಯ ಬಹುಮಾನ ಪಡೆದು ಗಮನ ಸೆಳೆದಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ಕುಚಿಪುಡಿ ನೃತ್ಯ ಕಲಾವಿದರು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೃತ್ಯ ಕೌಶಲ್ಯ, ಲಯಬದ್ಧತೆ ಹಾಗೂ ಭಾವಾಭಿವ್ಯಕ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಂದನಾ ಅವರು ನ್ಯಾಯಮಂಡಳಿಯ ಮೆಚ್ಚುಗೆಗೆ ಪಾತ್ರರಾಗಿ ದ್ವಿತೀಯ ಸ್ಥಾನವನ್ನು ಗಳಿಸಿದರು.

ವಂದನಾ ಅವರ ಈ ಸಾಧನೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದ್ದು, ಬೆಳಗೋಡಾಳ್ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಾಧನೆಗೆ ನೃತ್ಯ ತರಬೇತಿದಾರರಾದ ಜಿಲಾನ್ ಭಾಷಾ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ದುರುಗೇಶ್ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಕಲಾ ವಲಯದ ಗಣ್ಯರು ವಂದನಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

Previous Post Next Post

Contact Form

f="https://unpkg.com/video.js/dist/video-js.css" rel="stylesheet">