Free Health Care : ಖಾನಾಹೊಸಹಳ್ಳಿ:ಫೆ26-ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಜಯನಗರ  ಜಿಲ್ಲೆ ಕೂಡ್ಲಿಗಿ, ತಾಲೂಕಿನ ಖಾನಾಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರೋ ವಿದ್ಯಾನಿಕೇತನ ಶಾಲೆಯಲ್ಲಿ. ಫೆಬ್ರವರಿ26ರಂದು, ಡಾ, ಎನ್.ಟಿ.ಶ್ರೀನಿವಾಸ ಅಭಿಮಾನ ಬಳಗದಿಂದ. ಮಾಜಿ ಶಾಸಕ ದಿ,ಎನ್.ಟಿ.ಬೊಮ್ಮಣ್ಣ ನವರ ಸ್ಮರಣಾರ್ಥವಾಗಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಕಣ್ಣಿನ ವಿಶೇಷ ತಾಸಣೆ, ಹಾಗೂ ಚಿಕಿತ್ಸೆ ಮತ್ತು ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ. ವಿಶೇಷವಾಗಿ ಮಹಿಳೆಯರ  ಖಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ ಮತ್ತು ಔಷಧಿ ವಿತರಣೆ, ಮಕ್ಕಳ ಖಾಯಿಲೆಗಳು, ಹೃದ್ರೋಗ,ಸಕ್ಕರೆ ಖಾಯಿಲೆ,ರಕ್ತದೊತ್ತಡ,ಕ್ಷಯ,ಜ್ವರ,ಅಲರ್ಜಿ, ಪಿತ್ತಕೋಶ ತೊಂದರೆ,ಹರ್ನಿಯಾ,ಮೂತ್ರಪಿಂಡದಲ್ಲಿ ಕಲ್ಲು,ಪೈಲ್ಸ್,ಮಲಬದ್ದತೆ,ಹೊಟ್ಟೆನೋವು, ಅಲ್ಸರ್, ಗ್ಯಾಸ್ಟ್ರಿಕ್,ಮೂಳೆ ಸವೆತ,ಕೀಲುನೋವು, ಬೆನ್ನುನೋವು,ಬೆನ್ನು ಹುರಿ ತೊಂದರೆ ಸೇರಿದಂತೆ ಇತರೆ ಖಾಯಿಗಳಿಗೆ.ಉಚಿವಾಗಿ ತಪಾಸಣೆ ಮಾಡಲಾಗುವುದು, ಹಾಗೂ ಉಚಿತ ಚಿಕಿತ್ಸೆ ಮತ್ತು ಉಚಿತ ವಾಗಿ ಔಷದಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾರಣ ಖಾನಾಹೊಸಹಳ್ಳಿ ಗ್ರಾಮ ಸೇರಿದಂತೆ, ತಾಲೂಕಿನ ಸಮಸ್ತ ನಾಗರೀಕರು ಗ್ರಾಮೀಣ ಜನತೆ. ಮಕ್ಕಳು, ಮಹಿಳೆಯರು, ವೃದ್ಧರು,ಯುವಕರು ಒಳಗೊಂಡಂತೆ. ರೈತರು ಹಾಗೂ ಕಾರ್ಮಿಕರು, ಸರ್ವ ಸಾರ್ವಜನಿಕರು. ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ. ಈ ಮೂಲಕ ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗ, ಪ್ರಕಟಣೆಯಲ್ಲಿ ಕೋರಿದೆ.

ವರದಿ :ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">