ಏಪ್ರೀಲ್ ನಿಂದ ಜೂನ್ ತಿಂಗಳಿನವರೆಗೆ ಕೂಲಿಕಾರರಿಗೆ 90 ದಿನಗಳ ಕೆಲಸದ ಖಾತ್ರಿ
ಕೂಲಿ ಹಣ ದರ ಏರಿಕೆಯಿಂದ ಕುಟುಂಬಕ್ಕೆ ನೆರವಾಗಲಿದೆ ಖಾತ್ರಿ ಹಣ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ದಿನದ ಕೂಲಿ ಮೊತ್ತವನ್ನು 309 ರೂ.ನಿಂದ 316/- ರೂ ಏರಿಕೆ ಮಾಡಿ ಒಟ್ಟು 7 ರೂ ಹೆಚ್ಚಿಸಿ ಕೇಂದ್ರ ಗ್ರಾಮೀಣಾಭಿವೃದ್ದಿ ಮಂತ್ರಾಲಯ ಆದೇಶ ಹೊರಡಿಸಿದೆ.ಇದರಿಂದ ಕೂಲಿ ಕಾರ್ಮಿಕರು ಸಂತಸಗೊಂಡಿದ್ದು, ಹೊಸ ದರ ಏಪ್ರಿಲ್ -1 ರಿಂದಲೇ ಜಾರಿಗೆ ಬರುತ್ತದೆ.
ನಿತ್ಯ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಇದರಿಂದ ತುಂಬ ಅನುಕೂಲವಾಗಲಿದೆ.
ಹೀಗಾಗಿಯೇ ನರೇಗಾ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ನರೇಗಾದಿಂದಾಗಿ ಗ್ರಾಮೀಣ ಪ್ರದೇಶದ ಜನತೆ ತಾವು ಗುಳೆ ಹೋಗುವ ಬದಲಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ತಮ್ಮೂರಿನಲ್ಲಿಯೇ ಕೂಲಿ ಕೆಲಸ ಮಾಡಬಹುದಾಗಿದೆ. ನರೇಗಾದಡಿ ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಆಟದ ಮೈದಾನಗಳ ನಿರ್ಮಾಣ, ನೀರಿನ ತೊಟ್ಟಿ ನಿರ್ಮಾಣ ಹೀಗೆ ಹಲವು ಕೆಲಸಗಳನ್ನು ಮಾಡಬಹುದು. ಹೀಗೆ ನಾನಾ ಬಗೆಯ ಕಾಮಗಾರಿಗಳನ್ನು ಜನಸ್ನೇಹಿಯಾಗಿ ಮಾಡಲಾಗುತ್ತದೆ. ಇದೇ ಕಾರಣಕ್ಕೆ ನರೇಗಾ ಯೋಜನೆ ತುಂಬ ಯಶಸ್ವಿಯಾಗಿದೆ. ಇದ್ದೂರಿನಲ್ಲಿಯೇ ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಕೆಲಸ ದೊರೆಯುತ್ತಿದೆ.
ಪ್ರಮುಖವಾಗಿ ಗುಳೆ ತಪ್ಪಿಸುವುದಕ್ಕಾಗಿಯೇ ನರೇಗಾ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಕುಟುಂಬ ಸಮೇತ ಉದ್ಯೋಗ ಅರಸಿಕೊಂಡು ಗುಳೆ ಹೋಗುತ್ತಿದ್ದರು. ಇದನ್ನು ತಪ್ಪಿಸಲು ಜಾರಿಗೆ ಬಂದ ಯೋಜನೆಯಾಗಿದೆ.
ತಾಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರು 1.13 ಲಕ್ಷ ನೋಂದಣಿ ಮಾಡಿಕೊಂಡಿದ್ದಾರೆ. ಇಷ್ಟೊಂದು ಕಾರ್ಮಿಕರು ನರೇಗಾದಡಿ ತಮ್ಮ ತಮ್ಮ ಊರುಗಳಲ್ಲಿಯೇ ನಿತ್ಯ ಕೂಲಿ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಇದು ಅವರಿಗೆ ತುಂಬ ವರದಾನವಾಗಿ ಪರಿಣಮಿಸಿದೆ.
ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿರುವ ನಾವು ಇದರಲ್ಲಿ ಕೆಲಸ ಮಾಡಿ ಜೀವನ ಸಾಗಿಸತಿವಿ. ಜೀವನದ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಿಂದ ಕೂಲಿ ಹಣದಲ್ಲಿ ಹೆಚ್ಚಳ ಮಾಡಿರುವದರಿಂದ ನಮ್ಮಂತಹ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ನೆರವಾಗಲಿದೆ.
ಹೂಲಗೇರಾ ಗ್ರಾ.ಪಂ.ಗ್ರಾಮೀಣ ಪ್ರದೇಶದ ಜನರು ತಾವಿರುವ ಊರಿನಲ್ಲಿಯೇ ನರೇಗಾದಡಿ ಕೂಲಿ ಕೆಲಸ ಮಾಡಬಹುದು.ಜೀವನ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಕೂಲಿಕಾರರಿಗೆ ಅನುಕೂಲವಾಗುತ್ತದೆ. ಅಲ್ಲದೇ 100 ದಿನಗಳ ಕೂಲಿ ಕೆಲಸ ನಿರ್ವಹಿಸಿದಲ್ಲಿ ರೂ.31600/- ಕೂಲಿ ಹಣ ಜಮೆಯಾಗುತ್ತದೆ. ಕೂಲಿ ಹಣದಿಂದ ಮಳೆಗಾಲದಲ್ಲಿ ಜಮೀನು ಬಿತ್ತನೆ, ಮಕ್ಕಳ ಶಿಕ್ಷಣಕ್ಕಾಗಿ, ಕುಟುಂಬ ನಿರ್ವಹಣೆಗಾಗಿ ಅನುಕೂಲವಾಗಲಿದೆ. ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು
ವರದಿ: ಶ್ರವಣಕುಮಾರ ಅಂಗಡಿ ಸಿದ್ದಿ ಟಿವಿ, ಕುಷ್ಟಗಿ
Tags
ಟಾಪ್ ನ್ಯೂಸ್