ಪಾವಗಡ : ಈ ಕ್ಷೇತ್ರದ ಜನತೆ ನನ್ನನು 4 ಬಾರಿ ಶಾಸಕರನ್ನಾಗಿ 2 ಬಾರಿ ಮಂತ್ರಿಯನ್ನಾಗಿ ಮಾಡಿದ್ದರಿಂದ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿತು ಎಂದು ಶಾಸಕರಾದ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ನಾಗರಕಟ್ಟೆಯ ಬಳಿ ಸೋಮವಾರ ಶಿರಾ ರಸ್ತೆಯಿಂದ 700 ಮೀಟರ್ ವರೆಗೂ ಸುಮಾರು 2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗಾಗಿ ಗುದ್ದಲಿ ಪೂಜೆಯನ್ನು ನೆರವೇರಿಸಿ ನಂತರ ಮಾತನಾಡುತ್ತಾ , ಅತ್ಯಂತ ಹಿಂದುಳಿದ ಪ್ರದೇಶ ಎಂದು ಕರೆಯಲ್ಪಡುವ ಈ ತಾಲೂಕನ್ನು ಅಭಿವೃದ್ಧಿ ಹೊಂದಿದ ಪ್ರದೇಶವನ್ನಾಗಿ ಮಾಡುವ ಉದ್ದೇಶದಿಂದ ಹಲವು ಶಾಶ್ವತ ಹಾಗೂ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ತುಂಗಭದ್ರಾ ಎತ್ತಿನಹೊಳೆ ಅಪ್ಪರ್ ಭದ್ರ ಯೋಜನೆಗಳು ಪ್ರಗತಿ ಹಂತದಲ್ಲಿದ್ದು ಇನ್ನು ಕೆಲವೇ ತಿಂಗಳಗಳ ಒಳಗೆ ನೀರು ಹರಿಸಲಾಗುವುದು. ರೈಲ್ವೆ ಯೋಜನೆ ಬಹುತೇಕ ಮುಗಿದಿದ್ದು ಈಗಾಗಲೇ ಕೆ ರಾಂಪುರಕ್ಕೆ ರೈಲು ಬಂದು ಹೋಗಿದೆ ಮುಂದಿನ ದಿನಗಳಲ್ಲಿ ಪಾವಗಡ ತಲುಪಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಲಕ್ಷ್ಮೀದೇವಿ ಸದಸ್ಯರಾದ ಡಿ ವೇಲರಾಜು, ರಾಮಾಂಜಿನಪ್ಪ , ಸದಸ್ಯರಾದ ವೈ ನಾಗಭೂಷಣ ರೆಡ್ಡಿ, ರವಿಕುಮಾರ್ ಪಿ ಬಾಲಸುಬ್ರಮಣ್ಯಂ, ವೆಂಕಟರಮಣಪ್ಪ ಮಹಮ್ಮದ್ ಇಮ್ರಾನ್, ಪಿಕೆ ವಿಜಯಕುಮಾರ್, ರಾಮಾಂಜಿನಪ್ಪ, ರವಿಕುಮಾರ್, ಮುಖಂಡರಾದ ಪ್ರಮೋದ್ ಕುಮಾರ್, ಕೆಎಸ್ ವಿಶ್ವನಾಥ್, ಅವಿನಾಶ್, ಕೋಳಿ ಬಾಲಾಜಿ ಹಾಗೂ ಹಲವು ಕಾರ್ಯಕರ್ತರು ಹಾಜರಿದ್ದರು..
ವರದಿ:- ಅನಿಲ್ ಯಾದವ್ ಪಾವಗಡ
Tags
ರಾಜಕೀಯ