KRS : ಕಂಪ್ಲಿಯಲ್ಲಿ ‘ಎದ್ದೇಳು ಕನ್ನಡಿಗ – ಕೆಆರ್‌ಎಸ್ ಪಕ್ಷ ಸೇರು ಬಾ’ ಅಭಿಯಾನ

ಕಂಪ್ಲಿಯಲ್ಲಿ ‘ಎದ್ದೇಳು ಕನ್ನಡಿಗ – ಕೆಆರ್‌ಎಸ್ ಪಕ್ಷ ಸೇರು ಬಾ’ ಅಭಿಯಾನ

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ವತಿಯಿಂದ ‘ಎದ್ದೇಳು ಕನ್ನಡಿಗ – ಕೆಆರ್‌ಎಸ್ ಪಕ್ಷ ಸೇರು ಬಾ’ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ನಗರದ ಅಂಬೇಡ್ಕರ್ ಸರ್ಕಲ್ ಬಳಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಜನಜಾಗೃತಿ ಮೂಡಿಸುವ ಜೊತೆಗೆ ಪಕ್ಷದ ಸದಸ್ಯತ್ವ ನೋಂದಣಿ ನಡೆಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷರು, ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ನೋವು, ಕಷ್ಟ–ಕಾರ್ಪಣ್ಯಗಳಿಗೆ ರಾಜ್ಯವನ್ನು ಆಳುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳೇ ನೇರ ಕಾರಣವೆಂದು ಆರೋಪಿಸಿದರು. ತಮ್ಮ ಸ್ವಾರ್ಥ ಹಾಗೂ ಕುಟುಂಬ ರಾಜಕಾರಣಕ್ಕಾಗಿ ತಾಲೂಕಿನ ಜನರನ್ನು ಮರುಳುಗೊಳಿಸಿ ವಂಚಿಸಲಾಗುತ್ತಿದೆ ಎಂದು ಹೇಳಿದರು.

ಜನಪರ ಆಡಳಿತ ನಡೆಸಬೇಕಾದ ಪಕ್ಷಗಳು ಇಂದು ಜಾತಿ ರಾಜಕಾರಣ ಹಾಗೂ ಹಣಬಲದ ರಾಜಕಾರಣದಲ್ಲಿ ತೊಡಗಿಕೊಂಡಿವೆ ಎಂದು ಟೀಕಿಸಿದರು. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ನೆಲ–ಜಲ–ಗಡಿ–ಭಾಷೆಯ ರಕ್ಷಣೆ, ಹಾಗು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದಲೇ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">