ಕೊಪ್ಪಳ ಜಿಲ್ಲೆಯ ಕನಕಗಿರಿ ‌ಮೀಸಲು‌ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬೃಹತ್ ಸಮಾವೇಶ*

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರು ಮತ್ತು ಮಾಜಿ ಸಚಿವರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು ಮತ್ತು‌ ಕನಕಗಿರಿ ಕ್ಷೇತ್ರದ ಘೋಷಿತ ಅಭ್ಯರ್ಥಿ ಶ್ರೀ ಡಾ ಚಾರುಲ್ ವೆಂಕಟರಮಣ ದಾಸರಿ ನೇತೃತ್ವದಲ್ಲಿ ಕನಕಾಚಲಪತಿ ದೇಗುಲದ ಎಡಭಾಗದ ಕನಕಗಿರಿ ಉತ್ಸವ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಭಾರಿ ವಿಜ್ರಂಭ್ರಣೆ ಯಿಂದ ಜರುಗಿತು.

ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬಳ್ಳಾರಿಯ ಪ್ರಖ್ಯಾತ ವೈದ್ಯರಾದ ಶ್ರೀ ಡಾ ಚಾರುಲ್ ವೆಂಕಟರಮಣ ದಾಸರಿ ರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಜನಾರ್ಧನ‌ ರೆಡ್ಡಿಯವರು ನಾನು ಜಾತಿ ನಂಬಿಕೊಂಡ ಬಂದವನಲ್ಲ, ಜನರನ್ನು ನಂಬಿಕೊಂಡು ಬಂದಿರೋನು.
*ನನ್ನನ್ನು ಯಾರೇ ರಾಜಕೀಯದಿಂದ ದೂರ ಮಾಡಬೇಕು ಎಂಬ ತಂತ್ರ ಕುತಂತ್ರ ಮಾಡಿದರೂ ಜನರ ಮನಸಿನಿಂದ ಜನಾರ್ದನರಡ್ಡಿ ದೂರವಾಗಿಲ್ಲ.*

*ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯೋಜನೆ ಘೋಷಣೆ ಮಾಡಿದರು.*

*ಬಂಜಾರ ಸಮುದಾಯದ ಮಹಿಳೆಯರ ಅಮೃತ ಹಸ್ತದಿಂದ ರಾಣಿ ಚನ್ನಮ್ಮ ಅಭಯ ಹಸ್ತ ಪ್ರಣಾಳಿಕೆ ಬಿಡುಗಡೆ ಗೊಳಿಸಿದ್ದು ಕಾರ್ಯಕ್ರಮ ಕ್ಕೆ ಮೆರುಗು ನೀಡಿತ್ತು*

ರಾಣಿ ಚೆನ್ನಮ್ಮ ಅಭಯ ಹಸ್ತ ಯೋಜನೆಯ ಮೂಲಕ ಪ್ರತಿ ತಿಂಗಳು 2500 ಹಣ ನೀಡುವ ಯೋಜನೆ ಹಾಗೂ ಒನಕೆ ಓಬವ್ವ ಸ್ವಾಭಿಮಾನ ಯೋಜನೆಯ ಮೂಲಕ ಎಲ್ಲ ಯೋಜನೆಗಳಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಅವಕಾಶ ನೀಡುವುದಾಗಿ ತಿಳಿಸಿದರು.

ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಿರುವ ವೇತನಕ್ಕಿಂತ ಒಂದು ಸಾವಿರ ರುಪಾಯಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದರು.

*ಈ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಮೂಸ್ಟುರು ಗ್ರಾಮ ಪಂಚಾಯತಿ ಹಾಲಿ ಅಧ್ಯಕ್ಷ ಅದಿಲ್ ಪಾಷ ಸೇರಿದಂತೆ ಸಾವಿರಾರು ವಿವಿಧ ಪಕ್ಷದ ಮುಖಂಡರು ಕಲ್ಯಾಣ ರಾಜ್ಯ ಪಕ್ಷಕ್ಕೆ ಅಧಿಕೃತವಾಗಿ ಜನಾರ್ಧನ ರೆಡ್ಡಿಯವರೊಂದಿಗೆ ಶಾಲು ಹಾಕಿಸಿಕೊಂಡು ಸೇರ್ಪಡೆಯಾದರು.*
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಹೇಮಲತಾ, ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಡಾ ಸಂದ್ಯಾ ಚಾರುಲ್, ಸಿಂದನೂರು ಮತಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ ಮತ್ತು ಪಕ್ಷದ ಜಿಲ್ಲಾ ಮತ್ತು ಗಂಗಾವತಿ ಕ್ಷೇತ್ರದ ಕನಕಗಿರಿ ಕ್ಷೇತ್ರದ ಹಲವಾರು ಮುಖಂಡರು ಮತ್ತು ಕಾರ್ಯಕತರು ಉಪಸ್ಥಿತರಿದ್ದರು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">