Kushtagi: ಭಕ್ತ ಸಾಗರದಲ್ಲಿ ಮಧ್ಯೆ ನಡೆದ ತಳವಗೇರಿ ಶರಣಬಸವೇಶ್ವರ ಬುತ್ತಿ ಜಾತ್ರೆ

ಕುಷ್ಟಗಿ ಭಕ್ತ ಸಾಗರದಲ್ಲಿ ಮಧ್ಯೆ  ನಡೆದ ತಳವಗೇರಿ ಶರಣಬಸವೇಶ್ವರ ಬುತ್ತಿ ಜಾತ್ರೆ

 ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳವಗೆರೆ ಗ್ರಾಮದ ಪ್ರಖ್ಯಾತ ಪಡೆದಿರುವ ಭಾನುವಾರ ನಡೆಯಲಿರುವ ಸುಕ್ಷೇತ್ರ  ತ್ರಿವಿಧ ದಾಸೋಹಿ  ಶರಣಬಸವೇಶ್ವರ ಜಾತ್ರಾ ನಿಮಿತ್ತವಾಗಿ ಸುಮಾರು ದಶಕಗಳಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬುತ್ತಿ ಜಾತ್ರಿಯನ್ನು ಆಧ್ಯಾತ್ಮಿಕ ಪ್ರವಚನ ಮೂಲಕ ಅದ್ದೂರಿಯಾಗಿ ಆಚರಿಸಿದರು.

 ಕುಷ್ಟಗಿ ತಾಲೂಕಿನಲ್ಲಿ ಸುಮಾರು ದಶಕಗಳಿಂದ  ಪ್ರಸಿದ್ಧವಾಗಿರುವ ಲಕ್ಷ ಲಕ್ಷ ಭಕ್ತರನ್ನು ಹೊಂದಿರುವ ಶ್ರೀ ಶರಣಬಸವೇಶ್ವರ ದೇವಸ್ಥಾನ ಇದಾಗಿದ್ದು ಹೋಳಿ  ಹುಣ್ಣಿಮೆಯ ನಂತರ ರಂಗ ಪಂಚಮಿ ದಿನದೆಂದು   ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ  ಕಾರ್ಯಕ್ರಮದಲ್ಲಿ ಶ್ರೀ ಲಿಂಗೈಕ ಡಾಕ್ಟರ್ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಜ್ಞಾನ ಯೋಗ  ಆಶ್ರಮ ಬಿಜಾಪುರ್ ಇವರ ನುಡಿ ನಮನಗಳನ್ನು ಪ್ರಸ್ತುತಪಡಿಸಿದರು ಸಿದ್ದೇಶ್ವರ  ಶ್ರೀಗಳ ಚಿತ್ರ ಬಿಡಿಸಿದ ಚಿತ್ರಕಾರ ಆನಂದ್ ಚನ್ನಯ್ಯ ಪತ್ರಿಮಠ ಗಮನ ಸೆಳೆದರು. 
 ಜಾತ್ರಾ  ನಿಮಿತ್ಯ ಮುಂಚಿತವಾಗಿ ತಳವಗೇರ ಗ್ರಾಮದ ಸುತ್ತಮುತ್ತ  ಬರುವ  ಸುಮಾರು ಹಳ್ಳಿಗಳಿಂದ ಸಾವಿರಾರು ಭಕ್ತಾದಿಗಳಿಂದ ತಮ್ಮ ಮನೆಯಲ್ಲಿ ಬುತ್ತಿಯನ್ನು ಮಾಡಿಕೊಂಡು ತಳವಗೆರೆ ಗ್ರಾಮದ  ಆದರ್ಶ ವಿದ್ಯಾಲಯದ ಆವರಣದಲ್ಲಿ   ಪ್ರತಿ ವರ್ಷವೂ ಈ ಕಾರ್ಯಕ್ರಮ ಜರುಗುವುದು.

 ಮನೆಯಲ್ಲಿ ಭಕ್ತಿಯಿಂದ  ತಯಾರಿಸಿದ್ದ  ಬುತ್ತಿಯನ್ನು ಹೊತ್ತುಕೊಂಡು ಸರ್ವ ಧರ್ಮಗಳ ಸವಾರ್ದತೆಯ ಸಂಕೇತವನ್ನು ಒಳಗೊಂಡು ಚಂದ್ರನ ಬೆಳದಿಂಗಳೊಂದಿಗೆ ಭಕ್ತಿಯ ಭುತ್ತಿಯನ್ನು ಹೊತ್ತುಕೊಂಡು ಬಂದು  ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಿರುವುದು  ಶ್ರದ್ಧ ಭಕ್ತಿಯ ಸಂತೋಷದ ಸಂಕೇತವಾಗಿದೆ ಎಂದು ಸ್ಥಳೀಯ ಶರಣಬಸವೇಶ್ವರ ಭಕ್ತಾರಾದ ಶರಣಪ್ಪ ಮೇಟಿ  ತಮ್ಮಅಭಿಪ್ರಾಯ ಹಂಚಿಕೊಂಡರು 

 ಬುಧವಾರ ಮುಸ್ಸಂಜೆಯ ವೇಳೆ ಭಕ್ತಿ ಬುತ್ತಿಯನ್ನು ಹೊತ್ತುಕೊಂಡು ಬಂದಂತ ಭಕ್ತರನ್ನು ಉದ್ದೇಶಿಸಿ ದಿವ್ಯ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದ ಮಂಡ್ಯ ಜಿಲ್ಲೆಯ ಚಂದ್ರಮನ ಆಶ್ರಮದ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಇಂಥ ಒಂದು ಸಮಾರಂಭವನ್ನು  ನೋಡಿದರೆ ಈಗಾಗಲೇ ಅನೇಕ ವರ್ಷಗಳಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ ಇದು ಸಂಕೇತದ ಸಂತೋಷ ಸಂಕೇತ  ಮುಂದಿನ ದಿನಮಾನಗಳಲ್ಲಿ ಹತ್ತು ಜನ ಸ್ವಾಮೀಜಿಗಳನ್ನು ಕರೆತಂದು  ನಾವು ಕೂಡ ನಿಮ್ಮ ಜೊತೆ ಬೆರೆತು ಭಕ್ತಿಯ ಬುತ್ತಿ  ಪ್ರಸಾದವನ್ನು ಸ್ವೀಕರಿಸಬೇಕ ಅನಿಸುತ್ತಿದೆ  ಎಂದು ಭಕ್ತಿಯ ನಮನಗಳನ್ನು ನುಡಿದರು ಗುರು ಮತ್ತು ಶಿಷ್ಯರ ಸಂಬಂಧ ತಾಯಿ ಮತ್ತು ಮಕ್ಕಳ ಸಂಬಂಧ ಇದ್ದಂಗೆ ಹಣ ಮತ್ತು ಸಂಪತ್ತು ಗಳಿಸಬೇಕೆನ್ನುವ ಚಿಂತನೆ ಮಠಾಧೀಶರದಲ್ಲ ಭಕ್ತರ ಕುಟುಂಬಗಳು ಸಮೃದ್ಧಿಯಾಗಬೇಕು ನಮ್ಮ ಮಠಗಳಿಗೆ ನಂಬಿ ಬರುವ ಭಕ್ತರ ಬದುಕು ಸುಂದರವಾಗಿ ಸಾಗಬೇಕೆನ್ನುವುದೇ ನಮ್ಮ ಆಶೀರ್ವಾದದ ಸಂಕೇತ ಎಂದು ಶ್ರೀಗಳು ಅಭಿಪ್ರಾಯ ಪಟ್ಟರು  ಇದೇ ಸಂದರ್ಭದಲ್ಲಿ ಷ.  ಬ್ರ ವಿಶ್ವರಾಧ್ಯ ಶಿವಾಚಾರ್ಯರು ನಿಡಶೆಸಿ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು ಶಾಸಕರಾದ ಅಮರೇಗೌಡ ಪಾಟೀಲ್  ಬಯ್ಯಾಪುರ ಮಾಜಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ .ಕೆ ಶರಣಪ್ಪ ವಕೀಲರು.          ಕುರಿ ಮತ್ತು ಉಣ್ಣಿ ನಿಗಮದ ಮಾಜಿ ಅಧ್ಯಕ್ಷರಾದ ಶರಣು ತಳ್ಳಿಕೇರಿ  ಹಿರಿಯ ರೈತ ಮುಖಂಡರಾದ ದೇವೇಂದ್ರಪ್ಪ ಭೂಳಟಗಿ  KRPP ಪಕ್ಷದ ಚಂದ್ರಶೇಖರಯ್ಯ ಹಿರೇಮಠ್ ಬಿಜೆಪಿ ಮುಖಂಡರಾದ ಕೆ ಮಹೇಶ್ ಪೊಲೀಸ್ ಇಲಾಖೆಯ  ಸಿ ಪಿ ಐ ನಿಂಗಪ್ಪ ರುದ್ರಗೋಳು ಪಿ ಎಸ್ ಐ ಮೌನೇಶ್ ರಾಥೋಡ್ ತಳವಳಗೇರಾ   ಗ್ರಾಮದ  ಶರಣಬಸವೇಶ್ವರ ಕಮಿಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗ್ರಾಮದ ವಿವಿಧ  ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು  ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಸಾವಿರಾರು  ಭಕ್ತಾದಿಗಳು ಮತ್ತು ಮಹಿಳಾ ಮಹನೀಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 ನೋಡುಗರ ಕಣ್ಣಿಗೆ ವಿಶೇಷ ಪಡೆದ ಭಕ್ತಿ ಬುತ್ತಿಯ ಊಟ ಬದನೆಕಾಯಿ ಪಲ್ಯ ತೆಳ್ಳನ ಸಜ್ಜಿ ರೊಟ್ಟಿ ಖಡಕ್ ಜೋಳದ ರೊಟ್ಟಿ ಚಪಾತಿ  ಹಣ್ಣುಗಾಯಿ ಮೊಸರಿನಲ್ಲಿ ತಯಾರಿಸಿದ ಬಾಣದ ಅಣ್ಣ ಶೇಂಗಾ ಚಟ್ನಿ ಕಡ್ಲಿ ಚಟ್ನಿ  ಹಸಿಮೆಣಸಿನಕಾಯಿ ಚಟ್ನಿ ವಿವಿಧ ಬಗೆಯ ತಯಾರಿಸಿದ ರುಚಿ ರುಚಿಯಾದ ಊಟವನ್ನು ಸವಿದು  ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿದರು ಶಿಕ್ಷಕ ಉಮೇಶ್ ಮೇಳಿ ಅಚ್ಚುಕಟ್ಟಾಗಿ ಸ್ವಾಗತಿಸಿದರು 

 ಮಲ್ಲಿಕಾರ್ಜುನ ದೋಟಿಹಾಳ, ಕುಷ್ಟಗಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">