ಮೈಸೂರು-ಬೆಂಗಳೂರು ದಶಪಥ ಕ್ರೆಡಿಟ್ ನಮ್ಗೆ ಸಿಗಬೇಕು: ಇದರಲ್ಲಿ ಪ್ರತಾಪಸಿಂಹ ಪಾತ್ರ ಏನೂ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು : ಮೈಸೂರು ಬೆಂಗಳೂರು ದಶಪಥ ರಸ್ತೆಗೆ ಕ್ರೆಡಿಟ್ ವಾರ್ ಶುರುವಾಗಿದ್ದು, ಈ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾರ್ಚ್ 9 ರಂದು ಬೆಂಗಳೂರು ಮೈಸೂರು ಹೈವೆ ಪರಿಶೀಲನೆ ನಡೆಸುತ್ತೇನೆ ಎಂದು ಮೈಸೂರಿನಲ್ಲಿ ತಿಳಿಸಿದ್ದಾರೆ.
ಆ ರಸ್ತೆಯ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು. ಪ್ರತಾಪ್ ಸಿಂಹನದಾಗಲಿ ಬಿಜೆಪಿ ಸರ್ಕಾರದಾಗಲಿ ಯಾವ ಪಾತ್ರವೂ ಇಲ್ಲ. ಮತ್ತೆ ಪ್ರತಾಪ ಸಿಂಹ ಲೋಕಸಭಾ ವ್ಯಾಪ್ತಿಗೆ ಕೆಲ ಕಿ.ಮೀ ಮಾತ್ರ ಸೇರುತ್ತದೆ.
ಆದರೂ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಮಹದೇವಪ್ಪನಿಗೆ ಈ ರಸ್ತೆಯ ಎಲ್ಲಾ ಮಾಹಿತಿಯೂ ಗೊತ್ತಿದೆ. ಮಹದೇವಪ್ಪ ಮುಂದೆ ನಿಂತು ಈ ರಸ್ತೆ ಮಾಡಿಸಿದ.ನಾನು ಇದ್ದೆ, ಆಗ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದರು.ಅವರ ಕಾಲದಲ್ಲೇ ಅಪ್ರುವಲ್ ಆಗಿತ್ತು.ಈಗ ಆಸ್ಕರ್ ಫರ್ನಾಂಡೀಸ್ ಬದುಕಿಲ್ಲ.ಎಲ್ಲವೂ ಮಹದೇವಪ್ಪನ ಕಾಲದಲ್ಲಿ ಆಗಿದೆ.ನಮ್ಮ ಸರ್ಕಾರದ ಕೊಡುಗೆ ದಶಪಥ ರಸ್ತೆ ಎಂದು ಹೇಳಿದರು.
Tags
ರಾಜಕೀಯ