ತುರವಿಹಾಳ :
ಆಹಾರ ಮೇಳದಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯುತ್ತದೆ ಎಂ ಡಿ ಫಾರೂಕ್ ಸಾಬ್ ಖಾಜಿ.
ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಜರುಗಿದ ಮಕ್ಕಳಿಂದ ಆಹಾರ ತಯಾರಿಕೆ ಹಾಗೂ ಮಾರಾಟ ಮೇಳವನ್ನು ಎಂ ಡಿ ಫಾರೂಕ್ ಸಾಬ್ ಖಾಜಿ ಉದ್ಘಾಟಿಸಿದರು,
ನಂತರ ಮಾತನಾಡಿದ ಅವರು ಶಾಲಾ ಮಕ್ಕಳ ಆಹಾರ ಮೇಳದಿಂದ ಮಕ್ಕಳಿಗೆ ವ್ಯವಹಾರ ಜ್ಞಾನದ ಜೊತೆಗೆ,ಅಡುಗೆ ಮಾಡುವ ಬಗ್ಗೆ ಪ್ರಾಯೋಗಿಕ ತಿಳುವಳಿ ಮೂಡುತದೆ .ಬಿಡುವಿನ ವೇಳೆಯಲ್ಲಿ ಪೋಷಕರು ಅಡುಗೆ ಮಾಡುವಾಗ ಮಕ್ಕಳು ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.
ಹಾಗೂ ಸಿ ಆರ್ ಪಿ ಹನುಮೇಶ ಭಂಗಿ ಮಾತನಾಡಿ ವಿಶೇಷವಾದ ಚಟುವಟಿಕೆಗಳ ಮೂಲಕ ತರಕಾರಿ ಹಾಗೂ ಅಡುಗೆ ಪದಾರ್ಥಗಳ ಬಗ್ಗೆ ವಿಶೇಷ ಆಸಕ್ತಿ ಮೂಡಿಸಲು ಇಂತಹ ಕಾರ್ಯಕ್ರಮಕ್ಕೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ವರ್ಷ ಶಾಲಾ ವಿದ್ಯಾರ್ಥಿಗಳಿಂದ ಪೋಷ ಕಾಂಶಯುಕ್ತ ಆಹಾರ ಮೇಳ ಆಯೋಜಿಸ ಲಾಗುತ್ತಿದೆ ಎಂದರು.
ಆಹಾರಮೇಳದಲ್ಲಿ,ತರಕಾರಿಪಾನಿಪೂರಿ.ಬಿರಿಯಾನಿ.ದೋಸೆಕೋಸಂಬರಿ,ಪಾನಕ ಸೇರಿದಂತೆ ಹಲವು ಬಗೆಯ ಆಹಾರಗಳನ್ನು ಮಕ್ಕಳು ಉತ್ಸಾಹದಿಂದ ಸಿದ್ಧಪಡಿಸಿ ಮೇಲಕ್ಕೆ ತಂದಿದ್ದರು.*
ಈ ಸಂದರ್ಭದಲ್ಲಿ, ಮುಖಂಡರಾದ ಸಿರಾಜ್ ಪಾಷಾ. ಮುಖ್ಯ ಶಿಕ್ಷಕಿಯರು ಪೈಮಿದಾ ಬೆಗಂ,ವೀಣಾ. ಎಸ್ಡಿಎಂಸಿ ಅಧ್ಯಕ್ಷ ಮೈಬೂಬ್ ಸಾಬ್,ಮಹ್ಮದ್ ಉಸ್ಮಾನ್ ಚೌದ್ರಿ,ಗುಲಾಮ್ ನಬೀ ಅಬ್ದುಲ್ ರಹಿಮ್,ಅನ್ವರ್ ಪಾಷಾ,ಶಿವ
ಪುತ್ರಪ್ಪ,ರಮೇಶ್ ಯಾದವ್, ಆರ್ ಕೆ ಪಾಷಾ.ಶಿಕ್ಷಕಿಯರಾದ ನಪೀಸಾ ಸೂಲ್ತನ್,ಅಲಮಾಸ,ನಸ್ರೀನ,ಹಾಗೂ ವಿಧ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ವರದಿ : ಮೆಹಬೂಬ್ ಮೊಮಿನ್
Tags
ಟಾಪ್ ನ್ಯೂಸ್