ಹಾಗಿದ್ದರೂ ಕೂಡ ಅವ್ರು ಸಾಮಾನ್ಯರಲ್ಲಿ ಸಾಮಾನ್ಯರು. ಸಾವಿರ ಹೆಂಗಸರ ಜೊತೆಗೆ ತಿರುವಂತಪುರಂ ಲ್ಲಿ ಅವರು ಕೂಡ ಪೊಂಗಲ್ ಹಬ್ಬದಲ್ಲಿ ಅಡುಗೆ ಮಾಡುತ್ತಾರೆ. ಈ ರೀತಿ ಸೇವೆ ಸಲ್ಲಿಸುತ್ತಿರುವ ಇವರು ಕೋಟ್ಯಾಧೀಶೆ ಇನ್ಪೋಸಿಸ್ ಸುಧಾಮೂರ್ತಿ.
"ನಮ್ರತಾ ಮಾನಂ ದದಾತಿ" ಮನುಷ್ಯನಲ್ಲಿರಲೇಬೇಕಾದ ಸದ್ಗುಣವೆಂದರೆ ವಿನಯತೆ. ವಿನಯದಿಂದಲೇ ಮನುಷ್ಯನಿಗೆ ಗೌರವ. "ನಮ್ರತಾ ಮಾನಂ ದದಾತಿ" ಅಂದರೆ ನಮ್ರತೆ ಗೌರವವನ್ನು ಕೊಡುತ್ತದೆ. ವೃಕ್ಷ ಎಷ್ಟು ಎತ್ತರಕ್ಕೆ ಬೆಳೆದರೂ ಆಕಾಶವನ್ನು ಮುಟ್ಟಲಾರದು.
ಮನುಷ್ಯನಿಗೇಷ್ಟೇ ವಿದ್ಯೆ, ಸಂಪತ್ತುಗಳಿದ್ದರೂ ವಿನಯವಿಲ್ಲದಿದ್ದರೆ ಪರಿಪೂರ್ಣತೆ ಸಿಗಲಾರದು. ವಿನಯದಿಂದ ವರ್ತಿಸಿದರಷ್ಟೇ ಗೌರವ ಸಿಗುತ್ತದೆ. ಇಲ್ಲದಿದ್ದರೆ ದುರಹಂಕಾರಿಯೆಂಬ ಪಟ್ಟ ದೊರೆಯುತ್ತದೆ. ಮನುಷ್ಯನ ಮಾತಿನಲ್ಲಿ, ಕೃತಿಯಲ್ಲಿ, ವರ್ತನೆಯಲ್ಲಿ ವಿನಯವಿದ್ದರೆ ಆತ ಬಹುಬೇಗ ಪ್ರಸಿದ್ಧವ್ಯಕ್ತಿಯಾಗುತ್ತಾನೆ.
"ವಿನಯಾತ್ ಯಾತಿ ಪಾತ್ರತಾಮ್" ವಿನಯದಿಂದಲೇ ಗೌರವ. ಪ್ರಕೃತಿಯಲ್ಲಿರುವ ದೊಡ್ದಗುಣ ನಮ್ರತೆ. ನಾವಿರುವ ಭೂಮಿ, ಉಸಿರಾಡುವ ಗಾಳಿ, ಕುಡಿಯುವ ನೀರು, ಮಳೆಸುರಿಸುವ ಆಕಾಶ, ಬೆಳಕಿಗೆ ಸೂರ್ಯ, ಚಂದ್ರ, ಚಲಿಸುವ ಕಾಲ ಇವೆಲ್ಲವೂ ಭಗವಂತನಿಗೆ ವಿಧೇಯರಾಗಿ ತಮ್ಮ ಕೆಲಸವನ್ನು ಮುಂದುವರಿಸುತ್ತಲೇ ಇವೆ. ಇವುಗಳಿಗೆ ಅಹಂಕಾರ ಬಂದರೆ ಏನಾಗಬಹುದು..? ಆದರೆ, ಪ್ರಕೃತಿಯ ಮುಂದೆ ಕುಬ್ಜನಾಗಿರುವ ಮನುಷ್ಯನಿಗೆ ತುಂಬಾ ಅಹಂಕಾರ, ಜಗತ್ತನ್ನೇ ನನ್ನ ಬುದ್ಧಿವಂತಿಕೆಯಿಂದ ನಿಯಂತ್ರಿಸಬಲ್ಲೆನೆಂಬ ದುರಹಂಕಾರ..
ಮನುಷ್ಯನಲ್ಲಿರಲೇಬೇಕಾದ ಸದ್ಗುಣ ವಿನಯ. ವಿನಯದಿಂದಲೇ ಮನುಷ್ಯನಿಗೆ ಶೋಭೆ. ವಿನಯವೆಂದರೆ ಪ್ರತಿಯೊಂದು ಜೀವಿಯ ಜೊತೆಗೂ ಸೌಜನ್ಯದಿಂದ ವರ್ತಿಸುವುದು. ನಮ್ಮಲ್ಲಿರುವ "ನಾನು" ಎಂಬ ಅಹಂಕಾರವನ್ನು ತ್ಯಜಿಸಿದಾಗ ವಿನಯತೆ ಸಿಗುತ್ತದೆ.
ತನಗಿಂತಲೂ ಹಿರಿಯರೊಂದಿಗೆ, ಜ್ಞಾನಿಗಳೊಂದಿಗೆ, ಪೋಷಕರೊಂದಿಗೆ, ಗುರುಗಳೊಂದಿಗೆ, ಪ್ರಕೃತಿಯೊಂದಿಗೆ ಸೌಜನ್ಯದಿಂದ, ಗೌರವದಿಂದ, ವರ್ತಿಸುವುದೇ ನಮ್ರತೆ.
"ನಮಂತಿ ಫಲಿನೋ ವೃಕ್ಷಾಃ ನಮಂತಿ ಗುಣಿನೋ ಜನಾಃ ಶುಷ್ಕಕಾಷ್ಠಶ್ಚ ಮೂರ್ಖಶ್ಚ ನ ನಮಂತಿ ಕದಾಚನ"
ಫಲಗಳು ತುಂಬಿ ಬಂದಾಗ ವೃಕ್ಷಗಳು ನಮಿಸುತ್ತವೆ. ಸದ್ಗುಣಗಳಿಂದ ಕೂಡಿರುವ ಜನರು ವಿನಯದಿಂದ ವರ್ತಿಸುತ್ತಾರೆ. ಆದರೆ, ಒಣಗಿದ ಕಟ್ಟಿಗೆ ಹಾಗೂ ಮೂರ್ಖರು ಯಾರಿಗೂ ನಮಿಸುವುದಿಲ್ಲ. ಅವಿಧೇಯತೆ ಮೂರ್ಖರ ಗುಣ. ಯಾರ ಜೊತೆಯೂ ವಿನಯದಿಂದ ವರ್ತಿಸದಿರುವುದು ಮೂರ್ಖರ ಸ್ವಭಾವ. ಮಾತಿನಲ್ಲಿ ಹಾಗೂ ವರ್ತನೆಯಲ್ಲಿ ಅವರ ಶಿಕ್ಷಣ ಹಾಗೂ ಯೋಗ್ಯತೆಯ ಅರಿವಾಗುತ್ತದೆ.
ವಿನಯವಂತರ ಮಾತು ಮಧುರವಾದರೆ, ಅಹಂಕಾರಿಗಳ ಮಾತು ಕರ್ಣಕಠೋರ. ಅಂತಹ ಮೂರ್ಖರಿಂದ ಸಾಧ್ಯವಾದಷ್ಟು ದೂರವಿದ್ದರೆ ಒಳಿತು.
ಧರ್ಮೋ ರಕ್ಷತೀ ರಕ್ಷಿತಃ.
ಹೀಗೆಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್
Siddi Tv
"ಇದು ಕನ್ನಡಿಗರ ಧ್ವನಿ"
Follow Us On Website
Follow Us On YouTube
Follow Us On Facebook
Follow Us On Instagram