ಭೂತಲದಿನ್ನಿ ಮಲ್ಲಾಪುರ ಗ್ರಾಮಸ್ಥರಿಂದ ಶ್ರೀಶೈಲ ಪಾದಯಾತ್ರೆ
ಸಿಂಧನೂರು : ತಾಲೂಕಿನ ಭೂತಲದಿನ್ನಿ ಹಾಗೂ ಮಲ್ಲಾಪುರು ಗ್ರಾಮಸ್ಥರಿಂದ 13ನೇ ವರ್ಷದ ಶ್ರೀಶೈಲ ಮಲ್ಲಯ್ಯ ಪಾದಯಾತ್ರೆ.
ಪ್ರತಿ ವರ್ಷದಂತೆಯೂ ಈ ವರ್ಷವೂ ಕೂಡ ಎರಡು ಗ್ರಾಮದ ಜನರು ಜಂಟಿಯಾಗಿ ಮಲ್ಲಾಪುರ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ದರ್ಶನ್ ಪಡೆದುಕೊಂಡು ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಗೆ ಹಮ್ಮಿಕೊಂಡಿದ್ದಾರೆ.
ಬೂತಲದಿನ್ನಿ ಹಾಗೂ ಮಲ್ಲಾಪುರ್ ಗ್ರಾಮದಿಂದ ಪ್ರತಿ ವರ್ಷವೂ 150 ರಿಂದ 200 ಜನ ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದು ಮಹಿಳೆಯರು ಮಕ್ಕಳು ವಯಸ್ಸಾದವರು ಕೂಡ ಈ ಪಾದಯಾತ್ರೆಯನ್ನು ಮಾಡುವುದು ವಿಶೇಷವಾಗಿದೆ.
ಈ ಎರಡು ಗ್ರಾಮದ ಭಕ್ತರು ಸುಮಾರು ಎಂಟರಿಂದ ಹತ್ತು ದಿನಗಳ ಕಾಲ ನಡೆದುಕೊಂಡು ಹೋಗಿ ಮಲ್ಲಯ್ಯನ ದರ್ಶನ ಪಡೆಯುತ್ತಾರೆ.ಮಲ್ಲಾಪುರ ಮತ್ತು ಭೂತಲದಿನ್ನಿ ಗ್ರಾಮಸ್ಥರು ಮಲ್ಲಾಪುರ ಈಶ್ವರ ದೇವಸ್ಥಾನದಲ್ಲಿ ಪಾದಯಾತ್ರಿಗಳಿಗೆ ಬೆಳಗಿನ ಉಪಹಾರವನ್ನು ನೀಡಿ ಮಲ್ಲಾಪುರ ಈಶ್ವರ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿ ಪಾದಯಾತ್ರಿ ಗಳನ್ನು ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಪಂಡಿತಯ್ಯ ತಾತ,ಅಮರೇಗೌಡ ಮಲ್ಲಾಪುರ ಮನಸಿರಿ ಫೌಂಡೇಶನ್ ಅಧ್ಯಕ್ಷರು, ಉಪಸ್ಥಿತರಿದ್ದರು.
ವರದಿ : ಮೆಹಬೂಬ್ ಮೊಮಿನ್
Tags
ಟಾಪ್ ನ್ಯೂಸ್