ಮಾಜಿಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಕನಸಿನ ಕೂಸು ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ರವರಿಗೆ ಬೆಂಬಲಿಸುವಂತೆ ಮಂಡ್ಯ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷ ಬಿ ಎಂ ಕಿರಣ್ ಮನವಿ ಮಾಡಿದ್ರು.
ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ದಬ್ಬೇಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಜೈಪುರ, ಗೋವಿಂದನಹಳ್ಳಿ ಕೊಪ್ಪಲು, ಗೋವಿಂದನಹಳ್ಳಿ, ಕೆಂಪಿನಕೊಪ್ಪಲು, ಗೊಲ್ಲರಕೊಪ್ಪಲು, ಮರಿಯನಹೊಸೂರು, ತೆಂಗಿನಘಟ್ಟ, ತುರುಕನಕೊಪ್ಪಲು, ಜುಜ್ಜಲಕ್ಯಾತನಹಳ್ಳಿ, ಕಾಳೇನಹಳ್ಳಿ, ದಬ್ಬೇಘಟ್ಟ, ಡಾಣಹಳ್ಳಿ, ಬಿದರಹಳ್ಳಿ, ಮಾರ್ಗೋನಹಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಪಂಚರತ್ನ ಯೋಜನೆಗಳ ಬಗ್ಗೆ ಹರಿವು ಕಾರ್ಯಕ್ರಮವು ಅದ್ದೂರಿಯಾಗಿ ನೆಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್ ಮಾತನಾಡಿ ರಾಜ್ಯದಲ್ಲೇ ಅಭಿವೃದ್ಧಿಯಿಂದ ವಂಚಿತರಾಗಿರುವ ತಾಲೂಕು ಎಂದರೆ ಅದು ನಮ್ಮ ತಾಲೂಕು ಎಂದು ಭಾವಿಸಿದ್ದೇನೆ ಕ್ಷೇತ್ರದ ಜನತೆ ಸಚಿವ ಕೆ ಸಿ ನಾರಾಯಣಗೌಡರನ್ನು ಮೂರು ಬಾರಿ ಶಾಸಕರಾಗಿ ಮಾಡಿ, ಸಚಿವರಾದರೂ ಕೂಡ ತಾಲೂಕಿನಲ್ಲಿ ಹಲವು ವರ್ಷಗಳಿಂದ ಯಾವುದೇ ಜನಪರ ಅಭಿವೃದ್ಧಿಯ ಕೆಲಸಗಳು ಆಗದೆ ಅಭಿವೃದ್ಧಿ ಎನ್ನುವ ಪದ ಮರಿಚಿಕೆಯಾಗಿದೆ, ನಮ್ಮ ತಾಲೂಕಿನ ಜನತೆ ಅವರ ಆಸೆ ಆಮಿಷಕ್ಕೆ ಒಳಗಾಗದೆ ಗ್ರಾಮೀಣ ಭಾಗದ ರೈತರ ಏಳಿಗೆಗಾಗಿ ಪಂಚರತ್ನ ಯೋಜನೆಯ ಅನುಷ್ಠಾನಗೊಳಿಸಬೇಕು ಎಂದು ಶ್ರಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕೆಂದರೆ ಬಡತನದಲ್ಲಿ ಜನಿಸಿ ಗ್ರಾಮೀಣ ಪ್ರದೇಶದ ಜನರ ಕಷ್ಟ ಅರಿವಿರುವ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ಅವರಿಗೆ ಮತ ನೀಡುವ ಮೂಲಕ ಕೈ ಬಲಪಡಿಸಬೇಕು ಎಂದು ತಿಳಿಸಿದ್ರು.
ಬಳಿಕ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ನಾನು ಒಬ್ಬ ಬಡ ಕುಟುಂಬದ ಯುವಕ ನನ್ನ ಪಕ್ಷದ ವರಿಷ್ಠರು ಪಕ್ಷದ ನಿಷ್ಠೆಯಲ್ಲಿ ಸಾಗುವ ವ್ಯಕ್ತಿ ಎಂದು ನಂಬಿಕೆ ಇಟ್ಟು ನನಗೆ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿ ನಿಮ್ಮೆಲ್ಲರ ಸೇವೆ ಮಾಡಲು ನನಗೆ ಒಂದು ಸುವರ್ಣ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ನೀವು ನೀಡುವ ಮತದ ಮೌಲ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು, ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಲಿಯ ನಿರ್ದೇಶಕ ಸಿ.ಎನ್ ಪುಟ್ಟಸ್ವಾಮಿಗೌಡ್ರು, ಜೆ.ಡಿಎಸ್ ರಾಜ್ಯ ಮಾದ್ಯಮ ವಕ್ತಾರರಾದ ಅಶ್ವಿನ್ ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ಜಾನಕಿರಾಮ್, ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಅಖಿಲ ಕರ್ನಾಟಕ ವೀರ ಶೈವ ಮಹಾ ಸಭಾ ತಾಲ್ಲೂಕು ಅದ್ಯಕ್ಷ ಧನಂಜಯ್, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಐಕನಹಳ್ಳಿ ಕೃಷ್ಣೇಗೌಡ, ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಶೇಖರ್, ಆನೆಗೋಳ ಗ್ರಾ.ಪಂ ಉಪಾದ್ಯಕ್ಷ ರಮೇಶ್, ಮಾಜಿ ಅದ್ಯಕ್ಷ ವೆಂಕಟೇಶ್, ಹೆಚ್ ಟಿ ಮಂಜು ರವರ ಆಪ್ತ ಸಹಾಯಕ ಪ್ರತಾಪ್, ಗೊಲ್ಲರ ಕೊಪ್ಪಲು ಅನೀಲ್, ಸೇರಿದಂತೆ ಮತ್ತಿತ್ತರರು ಇದ್ದರು.
ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ
Tags
ರಾಜಕೀಯ