ಕುಕನೂರು ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆರ್ ಪಿ ರಾಜೂರ್ ಆಯ್ಕೆ
ಕುಕನೂರು : ಇದೇ ಮಾರ್ಚ್ 23 ರಂದು ರಾಜೂರ್ ಗ್ರಾಮದಲ್ಲಿ ನಡೆಯುವ ಕುಕನೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್ ಪಿ ರಾಜೂರ್ ಅವರನ್ನು ಸರ್ವನುಮತದಿಂದ ಆಯ್ಕೆಮಾಡಲಾಯಿತು
ತಾಲೂಕು ಕನ್ನಡಸಾಹಿತ್ಯ ಪರಿಷತ್ತಿನ ಪದಾದಿಕಾರಿಗಳ ಕಾರ್ಯಕಾರಣಿ ಸಭೆಯು ಇತ್ತೀಚೆಗೆ ಜರುಗಿತು.ಈ ಸಭೆಯಲ್ಲಿ ಕುಕನೂರು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ದಿ.೨೩ ರಂದು ನಡೆಸಲು ತೀರ್ಮಾನಿಸಲಾಯಿತು.ಅದೇ ರೀತಿ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನ ಹಿರಿಯ ಸಾಹಿತಿ ಆರ್ ಪಿ ರಾಜೂರು ಸರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಸಭೆಯಲ್ಲಿ ಸರ್ವಾಧ್ಯಕ್ಷ ಸ್ಥಾನಕ್ಕೆ ನಾಲ್ಕಾರು ಜನ ಸಾಹಿತಿಗಳ ಹೆಸರು ಪ್ರಸ್ತಾಪಕ್ಕೆ ಬಂದವು ಅಂತಿಮವಾಗಿ ರಾಜೂರು ಸರ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಕುಕನೂರು ತಾಲೂಕು ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ ತಿಳಿಸಿದ್ದಾರೆ.
ಸಮ್ಮೇಳನ ಆಯೋಜಿಸುವ ಕುರಿತು ಸುಕ್ಷೇತ್ರ ರಾಜೂರು ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬುದವಾರ ಗುರುವಾರ ಸಂಜೆ ಸಭೆ ಸೇರಿ ಗ್ರಾಮದ ಗುರು ಹಿರಿಯರು. ಯುವಕ ಸಂಘ ಸೇರಿದಂತೆ ವಿವಿಧ ಸಂಘದ ಪ್ರಮುಖರು.ಗ್ರಾ.ಪಂ.ಸದಸ್ಯರು ರಾಜೂರು ಗ್ರಾಮದಲ್ಲಿ ಅಕ್ಷರ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಡಲು ಒಮ್ಮತದ ಒಪ್ಪಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ರಾಜೂರು ಗ್ರಾಮದ ಗುರುಹಿರಿಯರು.ಕಸಾಪ ಪದಾದಿಕಾರಿಗಳು ಉಪಸ್ಥಿರಿದ್ದರು.