ಕಂಪ್ಲಿ: ತಾಲೂಕಿನಲ್ಲಿ 5 ಮತ್ತು 8ನೇ ತರಗತಿಗಳ
ರಾಜ್ಯ ಮಟ್ಟದ ಮೌಲ್ಯಾಂಕನ( ಬೋರ್ಡ್)ಪರೀಕ್ಷೆಗಳು
ಸೋಮವಾರ ಆರಂಭಗೊಂಡವು, ಎಮ್ಮಿಗನೂರು
ಕ್ಲಸ್ಟರ್ ಹೊರತುಪಡಿಸಿ ತಾಲೂಕಿನ ಐದು ಕ್ಲಸ್ಟರ್ ಗಳಲ್ಲಿಒಟ್ಟು 73 ಪ್ರಾಥಮಿಕ ಶಾಲೆಗಳ 5ನೇ ತರಗತಿಯ 1004 ವಿದ್ಯಾರ್ಥಿ, 1033 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 10 ವಿದ್ಯಾರ್ಥಿ, 7 ವಿದ್ಯಾರ್ಥಿನಿಯರು
ಗೈರಾಗಿದ್ದಾರೆ.
29 ಪ್ರೌಢಶಾಲೆಗಳ 8ನೇ ತರಗತಿಯ
984 ವಿದ್ಯಾರ್ಥಿ, 968 ವಿದ್ಯಾರ್ಥಿನಿಯರು ಪರೀಕ್ಷೆಗೆ
ಹಾಜರಾಗಿದ್ದು, 14 ವಿದ್ಯಾರ್ಥಿ, 6 ವಿದ್ಯಾರ್ಥಿನಿಯರು
ಗೈರಾಗಿದ್ದಾರೆ. ಇನ್ನು ತಾಲೂಕಿನ ದೇವಲಾಪುರ
ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಜರುಗಿದ 5ಮತ್ತು
8ನೇತರಗತಿಗಳ ಮೌಲ್ಯಾಂಕನ ಪರೀಕ್ಷೆಯಲ್ಲಿ 5ನೇ
ತರಗತಿಯ 49 ವಿದ್ಯಾರ್ಥಿಗಳು 3 ಕೊಠಡಿಗಳಲ್ಲಿ, 8ನೇ
ತರಗತಿಯ 107 ಮಕ್ಕಳು 5ಪರೀಕ್ಷಾ ಕೊಠಡಿಗಳಲ್ಲಿ
ಪರೀಕ್ಷೆ ಬರೆದರು. ಇದೇ ವೇಳೆ ಶಿಕ್ಷಣ ಸಂಯೋಜಕ ಜಿ.
ವೀರೇಶ್ ಮಾತನಾಡಿ, ತಾಲೂಕಿನ ಐದು ಕ್ಲಸ್ಟರ್‌ಗಳಲ್ಲಿ
ಪರೀಕ್ಷೆಗಳು ಪಾರದರ್ಶಕವಾಗಿ ಬೋರ್ಡ್
ನಿಯಮಾವಳಿಗಳನ್ವಯ ಕ್ರಮಬದ್ಧವಾಗಿ ಜರುಗಿವೆ
ಎಂದರು.
ವರದಿ : ಚನ್ನಕೇಶವ
Tags
ರಾಜ್ಯ