ಕೆಂಪುಕೆರೆಗೆ ಕೃಷ್ಣಾ ನೀರು, ನಾಳೆ ಸಿ. ಎಂ. ಬೊಮ್ಮಾಯಿ ಲೋಕಾರ್ಪಣೆ
ಯಲಬುರ್ಗಾ: ಕೊಪ್ಪಳ ಏತ ನೀರಾವರಿ ಯೋಜನೆಯ ಭಾಗವಾಗಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಮಹತ್ವಕಾಂಕ್ಷೀ ಯೋಜನೆ ಯಲಬುರ್ಗಾ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಮೂಲಕ ನಾಳೆ ಸಿ ಎಂ ಬಸವರಾಜ್ ಬೊಮ್ಮಾಯಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ.
ನಾಳೆ ಬೆಳಿಗ್ಗೆ 10.30 ಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಯಲಬುರ್ಗಾ ಕೆಂಪು ಕೆರೆಗೆ ನೀರು ತುಂಬಿಸುವ ಮೂಲಕ ಯೋಜನೆಯನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.
ರಾಜ್ಯ ಸರ್ಕಾರದ ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಮುಖ ಯೋಜನೆಗಳಲ್ಲಿ ಒಂದಾದ ಕೆರೆತುಂಬಿಸುವ ಯೋಜನೆ ಅಡಿಯಲ್ಲಿ ಯಲಬುರ್ಗಾ ತಾಲೂಕಿನ ಹಗೇದಾಳ್, ಯಲಬುರ್ಗಾ ಪಟ್ಟಣದ ಕೆಂಪು ಕೆರೆಗೆ ಕೃಷ್ಣಾ ನೀರು ತುಂಬಿಸಿ ಅಂತರ್ ಜಲ ಹೆಚ್ಚಿಸುವ ಮೂಲಕ ರೈತರ ನೀರಾವರಿಗೆ ಒತ್ತು ನೀಡುವುದು ಯೋಜನೆಯ ಉದ್ದೇಶ.
ಸ್ಥಳೀಯ ಶಾಸಕ, ಸಚಿವ ಹಾಲಪ್ಪ ಆಚಾರ್ ಅವರ ಅವಿರತ ಶ್ರಮದ ಫಲವಾಗಿ , ಹಗೇದಾಳ್, ಯಲಬುರ್ಗಾ ಕೆಂಪು ಕೆರೆಗೆ ಕೆರೆಗಳಿಗೆ ಕೃಷ್ಣಾ ನೀರು ತುಂಬಿಸುತ್ತಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ. ಯೋಜನೆಯು ಹಂತ ಹಂತವಾಗಿ ತಾಲೂಕಿನ ಇತರ ಕೆರೆಗಳಿಗೂ ವಿಸ್ತರಣೆಯಾಗಲಿದೆ.
ಯಲಬುರ್ಗಾ ಪಟ್ಟಣದ ಕ್ರೀಡಾಂಗಣದಲ್ಲಿ ಬ್ರಹತ್ ಕಾರ್ಯಕ್ರಮ ನಡೆಯಲಿದ್ದು ಕಂದಾಯ ಇಲಾಖೆಯಿಂದ ತಾಂಡಾ ಮುಕ್ತ ಗ್ರಾಮದಡಿಯಲ್ಲಿ ಸುಮಾರು 400 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ,ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ