ಯಶಸ್ವಿಯಾಗಿ ನಡೆದ ೨ನೇ ಸಂಕಲ್ಪ ಪಾದಯಾತ್ರೆ ಕಾರ್ಯಕ್ರಮ : ಶಾಸಕ ಗಣೇಶ್
ಕಂಪ್ಲಿ : ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶಾಸಕ ಗಣೇಶ್ ರವರ ಧರ್ಮಪತ್ನಿ ಶ್ರೀದೇವಿ ಜೆ. ಎನ್ ಅವರೊಂದಿಗೆ ಪೂಜೆ ಕಾರ್ಯಕ್ರಮ ನೆರವೇರಿಸಿ ದೇವರ ಆಶೀರ್ವಾದ ಪಡೆದು ಕಂಪ್ಲಿ ಕ್ಷೇತ್ರದ ಜನತೆಗೆ ಮಳೆ ಬೆಳೆ ಬಂದು ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಮಹಿಳೆಯರು ಆರತಿ ಬೆಳಗಿದರು ಹಾಗೂ ರಿಬ್ಬನ್ ಕತ್ತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಪಾದಯಾತ್ರೆ ಮೆರವಣಿಗೆ ಮೂಲಕ ಸಾಗಿ ಕುರುಗೋಡುನಲ್ಲಿ ಮಹಿಳೆಯರು ಆರತಿ ಬೆಳಗುವುದರ ಮೂಲಕ ಸ್ವಾಗತ ಮಾಡಿಕೊಂಡರು ಹಾಗೂ ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ವರೆಗೆ ಸಾಗಿ ದೇವರ ಆಶೀರ್ವಾದ ಪಡೆದು ಪಾದಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಯಿತು.
ಪಾದಯಾತ್ರೆ ಮೆರವಣಿಗೆ ಯಶಸ್ವಿಯಾಗಿ ಮುಕ್ತಾಯ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊ0ಡಿದ್ದಾರೆ.
Tags
ರಾಜಕೀಯ