KRPP : ಕುಷ್ಟಗಿ ರಾಷ್ಟ್ರೀಯ ಪಕ್ಷಗಳಿಗಿಂತ ಚುನಾವಣೆಯ ಪ್ರಚಾರಕ್ಕೆ ಹಳ್ಳಿ ಹಳ್ಳಿಗೆ ತೆರಳಿದ ಪ್ರಾದೇಶಿಕ ಪಕ್ಷ

 ಕುಷ್ಟಗಿ ರಾಷ್ಟ್ರೀಯ ಪಕ್ಷಗಳಿಗಿಂತ ಚುನಾವಣೆಯ ಪ್ರಚಾರಕ್ಕೆ ಹಳ್ಳಿ ಹಳ್ಳಿಗೆ ತೆರಳಿದ ಪ್ರಾದೇಶಿಕ ಪಕ್ಷ

 ಕುಷ್ಟಗಿ ವಿಧಾನಸಭಾ ಕ್ಷೇತ್ರ ಚುನಾವಣೆಯ ಅಧಿಸೂಚನೆ ಹೊರಡುವ ಮುಂಚೆ ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಭವನೀಯ ಅಭ್ಯರ್ಥಿಯಾದ ನಿವೃತ್ತ ತಶಿಲ್ದಾರ್   ಚಂದ್ರಶೇಖರಯ್ಯ  ಹಿರೇಮಠ್ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಪಕ್ಷದ ಪ್ರಚಾರವನ್ನು ಪ್ರಾರಂಭಿಸಿದ್ದು ರಾಷ್ಟ್ರೀಯ ಪಕ್ಷಗಳಿಗೆ ಉಬ್ಬಿರಿಸುವಂತಾಗಿದೆ.
ಹನುಮನಾಳ ಹನುಮಸಾಗರ ಭಾಗದಲ್ಲಿ ಕೆಲವು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ ಹಿರೇಮಠ ಅವರು ತಮ್ಮ ಪಕ್ಷದ ಪ್ರಣಾಳಿಕೆ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ರೈತ ಮತ್ತು ಬಡವರ ಪರವಾಗಿ ಮೂಲಭೂತ ಸೌಲಭ್ಯ ಹಾಗೂ ಕಾರ್ಮಿಕರ ಸೌಲಭ್ಯಗಳ  ಬರವಸೆಯ ತಮ್ಮ ಪಕ್ಷದ ಪ್ರಣಾಳಿಕೆ ಹಿಡಿದುಕೊಂಡು ಮತದಾರರ ಆಶೀರ್ವಾದ ಕೇಳಲು ತಾಲೂಕಿನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ

 ತಾವರಗೇರಿ ಹೋಬಳಿಯ ಮುಕುರ್ತ್ನಾಳು ನಾರಿನಾಳು ಗ್ರಾಮದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ ಹಿರೇಮಠ್ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ದಶಕಗಳಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿದರು ಕೆಲವರ ಹಸ್ತಕ್ಷೇಪದಿಂದ ಜೆಡಿಎಸ್ ಟಿಕೆಟ್ ಕೈ ತಪ್ಪಲು ಕಾರಣವಾಯಿತು ಅದಕ್ಕಾಗಿ ಪಕ್ಷವನ್ನು ತೊರೆದೆ ಜನಾರ್ದನ್ ರೆಡ್ಡಿ  ನನ್ನನ್ನು ಗುರುತಿಸಿ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ನೀನೇ ಅಭ್ಯರ್ಥಿಯಾಗಿ ಎಂದು ಹೇಳಿದ್ದಾರೆ

ಅದಕ್ಕಾಗಿ ತಮ್ಮ ಸೇವೆ ಮಾಡಲು ನನಗೆ ಆಶೀರ್ವಾದ ನೀಡಬೇಕೆಂದು ತಮ್ಮ ಗ್ರಾಮಕ್ಕೆ ಮತ ಕೇಳಲು ಬಂದಿದ್ದೇನೆ ತಾವುಗಳು ಆಶೀರ್ವಾದ ಮಾಡಿ ಕುಷ್ಟಗಿ ಕ್ಷೇತ್ರದ ಶಾಸಕನಾಗಿ ಮಾಡಬೇಕೆಂದು ತಮ್ಮಲ್ಲಿ ವಿಶ್ವಾಸದಿಂದ  ಬೇಡಿಕೊಳ್ಳುತ್ತೇನೆ ಭರವಸೆಯ ನುಡಿಗಳನ್ನು ಹಾಡಿದರು   ತಾಲೂಕಿನಲ್ಲಿ ಇನ್ನು ಅನೇಕ ಗ್ರಾಮಗಳಿಗೆ ಭೇಟಿ ನೀಡಿದ ನಿಯೋಜಿತ ಅಭ್ಯರ್ಥಿ ನಿವೃತ್ತ ತಹಶೀಲ್ದಾರ್  ಚಂದ್ರಶೇಖರಯ್ಯ ಹಿರೇಮಠ  ಮತದಾರರ ಮನವಲಿಸಲು  ಮುಂದಾಗಿದ್ದಾರೆ ಇದೇ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳಿಂದ ಕೆ ಆರ್ ಪಿ ಪಿ ಪಕ್ಷಕ್ಕೆ ಸೇರ್ಪಡೆಗೊಂಡರು ಈ ಒಂದು ಪ್ರಚಾರ ಸಭೆಯಲ್ಲಿ ಶರಣಯ್ಯ ಹಿರೇಮಠ ಶಶಿಧರ್ ಕುಂಬಾರ ಮೌಲಪ್ಪ ಮಡ್ಡೇರ,ದೊಡ್ಡ ಬಸವ, ಹಾಡಿನ ಶಾಮಣ್ಣ ಕುರಿ ದೊಡ್ಡಬಸಪ್ಪ ಮಾರುತಿ ಇಳಿಗೇರ್ ತಿಪ್ಪಣ್ಣ ಗೌಡ್ರು ನಿಂಗಪ್ಪ ವಡಿಗೇರಿ  ಶಿವಶಂಕ್ರಪ್ಪ ಕುರಿ ಹುಸೇನ್ ಸಾಬ್ ಸಂತೋಷ್ ಕುಮಾರ್ ಪುಟ್ಟರಾಜ ಇನ್ನು ಅನೇಕರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು

ಮಲ್ಲಿಕಾರ್ಜುನ ದೋಟಿಹಾಳ  ವರದಿಗಾರರು ಕುಷ್ಟಗಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">