ಕೊಪ್ಪಳ,: ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಲಯದಲ್ಲಿ ಯುಗಮಾನ ಪುರಷ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂದು ಸಾರಿದ ಜಗದ್ಗುರು ಶ್ರೀರೇಣುಕಾಚಾರ್ಯ ಅವರ ಜಯಂತಿ ರವಿವಾರ ಆಚರಿಸಲಾಯಿತು. ಜಯಂತಿಯ ಕಾರ್ಯಕ್ರಮದಲ್ಲಿ ತಾಲೂಕ ಅಭಿವೃದ್ದಿ ಅಧಿಕಾರಿಗಳಾದ ಚಂದ್ರಶೇಖರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಭಿಮನಗೌಡ ಹರ್ಲಾಪೂರ, ಉಪಾಧ್ಯಕ್ಷ ಚಂದ್ರಪ್ಪ ಹಿರೇಕುರಬರ, ಮುಖ್ಯ ಕಾರ್ಯನಿರ್ವಾಹಕರಾದ ನಾಗೇಶ ಗುಂಡದ್, ಗ್ರಾಮ ಪಂಚಾಯತ ಸದಸ್ಯರಾದ ಉಮೇಶ ಚವ್ಹಾಣ, ಜಡಿಯಪ್ಪ ಬೋವಿ, ದುರುಗೇಶ ಬಜೆಂತ್ರಿ, ರಮೇಶ ಕಂಬ್ಳಿ ಯುವ ಮುಖಂಡರಾದ ನಿಂಗಪ್ಪ ನಾಯಕ, ಯಲ್ಲಪ್ಪ ಪೂಜಾರ, ಪುರೋಹಿತರಾದ ಮಾರ್ಕಂಡಯ್ಯ ಸ್ವಾಮಿ, ಜಗದೀಶ ಸ್ವಾಮಿ, ಬಸವರಾಜ ಸ್ವಾಮಿ, ಭೋಗಾಪುರೇಶ, ಕೆರೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಖ್ಯಾಡೇದ್, ಮುಖಂಡರು, ಸಹಕಾರ ಸಂಘದ ಪದಾಧಿಕಾರಿಗಳು ಸಿಬ್ಬಂದಿಗಳು ಗ್ರಾಮದ ಯುವ ಮುಖಂಡರು, ಹಿರಿಯರು ಇದ್ದರು.