ಟೈರ್ ಫ್ಯಾಕ್ಟರಿ ಯಲ್ಲಿ ಅಗ್ನಿ ಆಕಸ್ಮಿಕ: ಕ್ಯಾಂಟರ್ ವಾಹನ ಅಗ್ನಿಗೆ ಆಹುತಿ
ಮೈಸೂರು :
ಮೈಸೂರಿನ ಕೆ.ಆರ್.ಎಸ್ ರಸ್ತೆಯಲ್ಲಿ ರೈಲ್ವೆ ಗೇಟ್ ಸಮೀಪ ಟೈರ್ ಫ್ಯಾಕ್ಟರಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಫ್ಯಾಕ್ಟರಿಯ ಹೊರಭಾಗ ನಿಲ್ಲಿಸಿದ್ದ ಕ್ಯಾಂಟರ್ ವಾಹನ ಅಗ್ನಿಗೆ ಆಹುತಿಯಾಗಿದೆ. ಇದು ಅಕಸ್ಮಿಕ ಘಟನೆಯೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದು ತಿಳಿದುಬಂದಿಲ್ಲ.
ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
ವೈರಲ್