ಬಳಿಕ ಮಾತನಾಡಿದ ಸಚಿವ ಡಾ ನಾರಾಯಣಗೌಡ ನನಗೆ ತಾಲ್ಲೂಕಿನ ಜನರ ಆರೋಗ್ಯವೇ ಬಹಳ ಮುಖ್ಯವಾಗಿದೆ. ರಾಜಕಾರಣ ಬರುತ್ತದೆ ಹೋಗುತ್ತದೆ. ಆದರೆ ನನ್ನ ದೇಹದಲ್ಲಿ ಉಸಿರಿರುವ ತನಕ ತಾಲ್ಲೂಕಿನ ಜನರ ಸೇವೆಯನ್ನು ಮಾಡುತ್ತೇನೆ.ನನ್ನ ಅಧಿಕಾರ ಅವಧಿಯಲ್ಲಿ ತಾಲ್ಲೂಕನ್ನು ರಾಜ್ಯದಲ್ಲಿ ಮಾದರಿ ತಾಲ್ಲೂಕನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ. ನಮ್ಮ ತಾಲ್ಲೂಕಿನ ಜನತೆ ಆರೋಗ್ಯವಂತರಾಗಿ ಬಾಳ್ವೆ ಮಾಡಬೇಕೆಂಬ ಆಸೆ ನನ್ನ ದೊಡ್ಡ ಕನಸಾಗಿದೆ.
ಅದನ್ನು ನೆನಸಾಗಿಸಲು ತಾಲ್ಲೂಕಿನಾದ್ಯಂತ ನುರಿತ ತಜ್ಞ ವೈದ್ಯ ಸಿಬ್ಬಂದಿಯ ಸಹಕಾರದಿಂದ ಬೃಹತ್ ಆರೋಗ್ಯ ಮೇಳಗಳನ್ಮು ಹಮ್ಮಿಕೊಂಡು ತಾಲ್ಲೂಕಿನ ಜನರ ಆರೋಗ್ಯವನ್ನು ತಪಾಸಣೆ ಮಾಡಿಸಿ ಸ್ಥಳದಲ್ಲೇ ಸೂಕ್ತ ಚಿಕಿತ್ಸೆ ನೀಡುವುದರ ಮೂಲಕ ಸ್ಪಂದಿಸುವ ಕೆಲಸವನ್ನು ಮಾಡಿಸಿದ್ದೇನೆ.ಅಲ್ಲದೇ ಹೃದಯ ಘಾತ,ಕ್ಯಾನ್ಸರ್, ಟಿ ಬಿ,ನರರೋಗ, ಕಿಡ್ನಿ ಹಾಗೂ ಇನ್ನಿತರ ಸೂಕ್ಷ್ಮ ಕಾಯಿಲೆಗಳನ್ನು ಗುಣಪಡಿಸಲು ಮಂಡ್ಯ, ಮೈಸೂರು, ಬೆಂಗಳೂರು ನಗರಗಳಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೂಕ್ತ ರೀತಿಯ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ.ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವವನ್ನು ಪಾತ್ರವನ್ನು ಹೊಂದಿರುತ್ತಾರೆ.ನಮ್ಮ ಹೆಣ್ಣುಮಕ್ಕಳು ಆರೋಗ್ಯ ವಂತರಾಗಿದ್ದರೆ ಕುಟುಂಬದಲ್ಲಿ ಸಂತೋಷದಿಂದ ಜೀವನವನ್ನು ನಡೆಸುತ್ತಾರೆ.ಎಷ್ಟೇ ದುಡ್ಡಿದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯವಿಲ್ಲ.ಕೆಲವು ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ ದೂರದ ನಗರಗಳಿಗೆ ಹೋಗಬೇಕಾದ ಸಂದರ್ಭ ಬರುತ್ತದೆ.ಆದ್ದರಿಂದ ಮನಗಂಡು ಗರ್ಭಿಣಿ ಮಹಿಳೆಯರು ಹಾಗೂ ಜನಿಸಿದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆರೋಗ್ಯವನ್ನು ಕಾಪಾಡುವ ಸಲುವಾಗಿ ಪಟ್ಟಣದಲ್ಲಿ ಸುಮಾರು 28 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಕಾಮಗಾರಿಗೆ ಇಂದು ಗುದ್ದಲಿ ಪೂಜೆಯನ್ನು ಎಲ್ಲರ ಸಹಕಾರದಿಂದ ಮಾಡಿದ್ದೇನೆ.ಕಾಮಗಾರಿಯ ಗುಣಮಟ್ಟವನ್ನು ಹೆಚ್ಚಿಸುವಂತೆ ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಭೂಮಿ ದಾನ ಮಾಡಿದ ದುಂಡಶೆಟ್ಟಿ ಲಕ್ಷ್ಮಮ್ಮ ಕುಟುಂಬದ ಸದಸ್ಯ ವೆಂಕಟಕೃಷ್ಣಪ್ಪ ಶೆಟ್ಟಿ, ಮುಡಾ ಅಧ್ಯಕ್ಷ ಕೆ ಶ್ರೀನಿವಾಸ್,ತಾಲ್ಲೂಕು ಆಡಳಿತ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಸೂದನ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಶಿವಕುಮಾರ್,ಡಾ.ಜಯಪ್ರಕಾಶ್, ಪುರಸಭಾ ಸದಸ್ಯ ಗಿರೀಶ್, ಹೆಚ್ ಆರ್ ಲೋಕೇಶ್,ಡಾ ಪ್ರಿಯಾಂಕಾ, ಡಾ ಗಿರೀಶ್, ಡಾ ಧನಂಜಯ,ಡಾ.ಶ್ರೀಕಾಂತ್, ಡಾ ರವಿ,ಡಾ.ರಾಧಾ,ಡಾ ಶಶಿಧರ್, ಡಾ.ಪುಟ್ಟಸ್ವಾಮಿ,ಡಾ ಛಾಯಾ,ಡಾ ದಿವ್ಯಾ,ಔಷಧಿ ತಜ್ಞ ಸತೀಶ್ ಬಾಬು,ಶುಶ್ರೂಕಿ ಬೇಬಿ,ದ್ವಿತೀಯ ದರ್ಜೆ ಸಹಾಯಕಿ ಮಂಗಳಾ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್, ಬಿಜೆಪಿ ನಗರ ಘಟಕ ಅಧ್ಯಕ್ಷೆ ಚಂದ್ರಕಲಾ,ವಕೀಲ ಪ್ರವೀಣ್,ಗುತ್ತಿಗೆದಾರ ಬಲ್ಲೇನಹಳ್ಳಿ ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಕಾಮನಹಳ್ಳಿ ಮಂಜುನಾಥ್
Siddi Tv
"ಇದು ಕನ್ನಡಿಗರ ಧ್ವನಿ"
Follow Us On Website CLICK HERE
Follow Us On YouTube CLICK HERE
Follow Us On Facebook CLICK HERE
Follow Us On Instagram CLICK HERE
Join Us On Whatsapp CLICK HERE