ಪ್ರತಿಭಾ ಕಾರಂಜಿಯಲ್ಲಿ ವಿಜಯನಗರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ವಿಜಯ ಪ್ರದರ್ಶನ
ಕಂಪ್ಲಿ: ಕುರುಗೋಡಿನ ಸೆಕ್ರೆಟ್ ಹಾರ್ಟ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜಯನಗರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಧಾರ್ಮಿಕ ಪಠಣ (ಸಂಸ್ಕೃತ) ಸ್ಪರ್ಧೆಯಲ್ಲಿ ಸಂಪ್ರೀತ್ ಪೂಜಾರ್, ಗಜಲ್‌ನಲ್ಲಿ ಖತೀಜ, ಚರ್ಚಾ ಸ್ಪರ್ಧೆಯಲ್ಲಿ ಮೋಕ್ಷಿತ, ಕವ್ವಾಲಿ ವಿಭಾಗದಲ್ಲಿ ಖೈರುನ್ನಿಸ ಹಾಗೂ ತಂಡ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಕಥೆ ಹೇಳುವ ಸ್ಪರ್ಧೆಯಲ್ಲಿ ಅಖಿಲ್, ಹಿಂದಿ ಕಂಠಪಾಠದಲ್ಲಿ ಸೀಮಾ ಸಾದಿಯಾ, ಕವನ ವಾಚನದಲ್ಲಿ ದೀಕ್ಷಿತ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಧಾರ್ಮಿಕ ಪಠಣ (ಸಂಸ್ಕೃತ) 8–10 ವಿಭಾಗದಲ್ಲಿ ಶ್ರೀನಿಧಿ ತೃತೀಯ ಸ್ಥಾನ ಗಳಿಸಿದ್ದಾರೆ.ಹೀಗೆ ಹಲವಾರು ಸ್ಪರ್ಧೆಗಳಲ್ಲಿ ವಿವಿಧ ಸ್ಥಾನಗಳನ್ನು ಪಡೆದು ವಿದ್ಯಾರ್ಥಿಗಳು ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಈ ಸಾಧನೆಗಾಗಿ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದವು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
