KR Pete-ತೊರೆಯಮ್ಮದೇವಿಯ ಪೂಜಾಮಹೋತ್ಸವ

ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ ಗ್ರಾಮದಲ್ಲಿ ತೊರೆಯಮ್ಮದೇವಿಯ ಪೂಜಾಮಹೋತ್ಸವ  ಹಾಗೂ ಮೆರವಣಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ  ನಡೆಯಿತು.

ಶುಕ್ರವಾರ ಸಂಜೆ ತೊರೆಯಮ್ಮದೇವಿಯ ಅಲಂಕೃತ ಉತ್ಸವಮೂರ್ತಿಯನ್ನು  ಟ್ರಾಕ್ಟರ್ ಮೇಲೆ ಇರಿಸಿ ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಉತ್ಸವದ ಅಂಗವಾಗಿ ಗ್ರಾಮದ  ಎಲ್ಲಾ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು. ಗ್ರಾಮದ ಎಲ್ಲಾ ಮನೆಗಳ ಭಕ್ತರು ದೇವಿಗೆ ಹಾರ, ಹಣ್ಣುಕಾಯಿ, ಕರ್ಪೂರ ಮುಂತಾದುವುಗಳನ್ನು ಸಲ್ಲಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ತೊರೆಯಮ್ಮ ದೇವಿಯ ಹಿನ್ನೆಲೆ
ಪುರಾತನ ಕಾಲದಲ್ಲಿ ದನಗಳನ್ನು ತೊಳೆಯುವ ಸಲುವಾಗಿ  ಹೋದ ಗ್ರಾಮಸ್ಥರಿಗೆ ವಿಗ್ರಹ ಸಿಕ್ಕಿತು. ನಂತರ ದೇವರು ಮಾನವನ ರೂಪದಲ್ಲಿ ಬಂದು ನಾನು ತೊರೆಯಮ್ಮ ದೇವಿ ನನ್ನನ್ನು ಭಕ್ತಿಯಿಂದ ಪೂಜಿಸಿದರೆ ಗ್ರಾಮಕ್ಕೆ ಒಳ್ಳೆಯದನ್ನು ಮಾಡುತ್ತೇನೆ ಎಂದು ಅಭಯ ನೀಡಿದ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ಯುಗಾದಿಯ ಸಮೀಪದ ದಿನಗಳಲ್ಲಿ ತೊರೆಯಮ್ಮನ ಹಬ್ಬವನ್ನು ಮಾಡಲಾಗುತ್ತದೆ. ಈ ಹಿಂದೆ ಬೇಲದಕೆರೆ, ಚನ್ನಾಪುರ, ಹೊಸೂರು ಮೂರು ಗ್ರಾಮಗಳು ಸೇರಿ ಬಹಳ ಅದ್ದೂರಿ ಯಾಗಿ ಜಾತ್ರೆ ಮಾಡಲಾಗುತ್ತಿತ್ತು. ಇತ್ತೀಚಿಗೆ ಮೂರು ಗ್ರಾಮಗಳು ಪ್ರತ್ಯೇಕವಾಗಿ ಹಬ್ಬವನ್ನು ಮಾಡುವ ಪ್ರತೀತಿ ಬೆಳೆದು ಬಂದಿದೆ.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Previous Post Next Post

Contact Form

f="https://unpkg.com/video.js/dist/video-js.css" rel="stylesheet">