ವಿವಿಧ ಪಕ್ಷಗಳನ್ನು ತೊರೆದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ.
ಕುಷ್ಟಗಿ ತಾಲೂಕು ಅಡವಿಬಾವಿ ಗ್ರಾಮದ ಮೂರ್ನಾಲ್ಕು ವರ್ಷಗಳಿಂದ ರಾಜಕೀಯದಿಂದ ದೂರವಿದ್ದ ಮಾಧ್ಯಮ ಪ್ರತಿನಿಧಿಯಾಗಿ ಕಾರ್ಯನಿರ್ಸುತ್ತಿದ್ದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿರ್ದೇಶಕ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ್ ಮಲ್ಲಿಕಾರ್ಜುನ ದೋಟಿಹಾಳ ನೇತೃತ್ವದಲ್ಲಿ 50 ಕ್ಕಿಂತ ಹೆಚ್ಚು ಯುವಕರು ಕಾಂಗ್ರೆಸ್ಸನ್ನು ತೊರೆದು ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು ಈ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲರು ನನಗೆ ಅಡವಿಬಾವಿ ಗ್ರಾಮ ರಾಜಕೀಯ ರಾಜಕೀಯವಾಗಿ ಜನ್ಮ ನೀಡಿದ ಗ್ರಾಮ ಈ ಗ್ರಾಮವನ್ನು ನನ್ನ ಉಸಿರು ಇರುವರೆಗೂ ಯಾವತ್ತೂ ಮರೆಯೋದಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು.
ಜನರ ಕೆಲಸ ಆಗಬೇಕು ಜನರಿಗೆ ಒಳ್ಳೇದು ಮಾಡಬೇಕೆಂಬ ಪ್ರಮಾಣಿಕ ಪ್ರಯತ್ನ ಮಾಡಿದಂತವನು ನಾನು ನಾನು ಕೆಲಸ ದುಡ್ಡನ್ನು ಕೊಳ್ಳಿ ಹೊಡೆದು ಅದೇ ದುಡ್ಡಿನಿಂದ ಜನರಿಗೆ ಅಂಚಿ ಶಾಸಕನಾಗಿ ಆಯ್ಕೆ ಆಗಬೇಕು ಎಂಬುವುದು ನನ್ನ ಉದ್ದೇಶ ಅಲ್ಲ ಮತ್ತೊಮ್ಮೆ ಆಲೋಚನೆ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯು ಸ್ವಾಭಿಮಾನದ ಚುನಾವಣೆಯಾಗಿದ್ದು ಕ್ಷೇತ್ರ ಉಳಿವಿಗಾಗಿ ತಾವೆಲ್ಲ ಪ್ರಯತ್ನಿಸಬೇಕು ಯಾವುದೇ ಹಣ ಆಮಿಷಕ್ಕೆ ಒಳಗಾಗದೆ ಭಾರತೀಯ ಜನತಾ ಪಕ್ಷದ ಕಮಲ ಗುರುತಿಗೆ ಮತವನ್ನು ಕೊಟ್ಟು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕೆಂದು ಕಾರ್ಯಕರ್ತರಲ್ಲಿ ಯುವ ಮತದಾರರಲ್ಲಿ ಮನವಿ ಮಾಡಿದರು.
ವರದಿ: ಶಿವಕುಮಾರ
Tags
ರಾಜಕೀಯ