ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಕಳಪೆ ಕಾಮಗಾರಿ : KRS ಪಕ್ಷ ಆರೋಪ

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಕಳಪೆ ಕಾಮಗಾರಿ ಕೆ ಆರ್ ಎಸ್ ಪಕ್ಷದ  ವಿಜಯನಗರ ಜಿಲ್ಲಾ ಯುವ ಘಟಕದ ಅಧ್ಯಕ್ಷ  ವೀರನಗೌಡ ಆರೋಪ.
 ಹಗರಿಬೊಮ್ಮನಹಳ್ಳಿ ಇಂದ ಕೊಟ್ಟೂರಿಗೆ ಹೋಗುವ ರಸ್ತೆ ಸುಮಾರು ಒಂದು ತಿಂಗಳ ಹಿಂದೆ ಮಾಡಿರುವ ರಸ್ತೆ ಯಾವ ರೀತಿ ಆಗಿದೆ ಎಂದು ಸಾರ್ವಜನಿಕರು  ಕಣ್ತುಂಬ ನೋಡಿಕೊಳ್ಳಬೇಕು  ಬಿಜೆಪಿಯ ಭ್ರಷ್ಟಾಚಾರದ ವ್ಯವಸ್ಥೆಯಲ್ಲಿ ಬರುವ ರಸ್ತೆ ಕಾಮಗಾರಿಗಳು ಯಾವ ರೀತಿ ಆಗಿದೆ ಎನ್ನುವುದಕ್ಕೆ ತಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ ನರಗುಂದ ಕೊಪ್ಪಳ ಕೊಟ್ಟೂರು ಗದಗ್ ನವಲಗುಂದ ರೋಣ ಮುಂಡರಗಿ ಶಿರಹತ್ತಿ ಲಕ್ಷ್ಮೇಶ್ವರ ಅನೇಕ ತಾಲೂಕುಗಳಲ್ಲಿ ಹಾಗೂ ಗ್ರಾಮಗಳಲ್ಲಿ ರಸ್ತೆಗಳು ತುಂಬಾ ಕಳಪೆ ಮಟ್ಟದಿಂದ ನಿರ್ಮಿಸುತ್ತಿದ್ದಾರೆ ಇದರ ಬಗ್ಗೆ ಲೋಕೋಪಯೋಗಿ ಸಚಿವ  ಸಿಸಿ ಪಾಟೀಲರು ಮೌನವಾಗಿದ್ದಾರೆ ಈ ಮೌನಕ್ಕೆ ಕಾರಣವೇನು ಇರಬಹುದು ಎಂಬುದು ಕೆಆರ್‌ಎಸ್ ಪಕ್ಷದ ಮುಖಂಡರಿಗೆ ಅನುಮಾನ ಮೂಡುವಂತಾಗಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಾಡ ನಿದ್ರೆಗೆ ಜಾರಿದ್ದಾರೆ ಈ ರಾಜ್ಯ ಸರ್ಕಾರದಲ್ಲಿ ಏನಾದರೂ ಪ್ರಶ್ನೆ ಮಾಡಿದರೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಹಾಕುವ ಕೆಲಸ ಮಾಡುತ್ತಾರೆ ಇಂತಹ ಲಜ್ಜೆಗಟ್ಟ ಬಿಜೆಪಿ ಸರ್ಕಾರವನ್ನು ಕಿತ್ತು ಎಸೆಯಬೇಕು ಹಾಗೂ ಮಾಧ್ಯಮದವರು  ಸಾರ್ವಜನಿಕರಿಗೆ ಬೇಕಾಗಿರುವ ಮೂಲ ಸೌಕರ್ಯಗಳ ಬಗ್ಗೆ ತೋರಿಸುವುದನ್ನು ಬಿಟ್ಟು ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಕಿತ್ತಾಡುವುದನ್ನು ಮತ್ತು ಹಿಂದೂ ಮುಸ್ಲಿಂ ಗಲಾಟೆಯ ಬಗ್ಗೆ ಹೆಚ್ಚು ಹೊತ್ತು ನೀಡಿ ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸಗಳನ್ನು ಕೆಲವು ಮಾಧ್ಯಮಗಳು ಮಾಡುತ್ತಿವೆ ಸಚಿವರು ತಮಗೆ ಬೇಕಾದ ಗುತ್ತಿಗೆದಾರರಿಗೆ ಕೆಲಸ ನೀಡಿ 40 ಪರ್ಸೆಂಟ್ ಬದಲು 70 ಪರ್ಸೆಂಟ್ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕೆ ಆರ್ ಎಸ್ ಪಕ್ಷದ ಮುಖಂಡ ವೀರನಗೌಡ ಮಾಧ್ಯಮ ಹಾಗೂ  ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು  ಜೆಡಿಎಸ್ ವಿರುದ್ಧ ಹರಿ ಹಾಯ್ದರು.

 ಹನುಮಂತ  ಚಲವಾದಿ, Siddi TV, ಹಗರಿಬೊಮ್ಮನಳ್ಳಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">