ಬಿಜೆಪಿ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸಿ.ಆರ್.ಹನುಮಂತ ಮಾತನಾಡಿ ಪರಿಶಿಷ್ಟ ಸಮುದಾಯಗೊಳಗೆ ಒಳ ಎಸ್‌ಸಿ ಮೀಸಲಾತಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿದೆ.ಗುಂಪು ಒಂದರಲ್ಲಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ 6ರಷ್ಟು ಮೀಸಲಾತಿ, ಗುಂಪು 2 ರಲ್ಲಿ ಹೊಲೆಯ ಸಂಬಂಧಿತ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3ರಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ ಆಗಲಿದೆ ಎಂದರು.
ಜಿ.ರಾಮಣ್ಣ ಮಾತನಾಡಿ ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದ್ದು ತುಂಬಾ ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಆರ್.ಆಂಜನೇಯ,ಹೂಗಾರ ರಮೇಶ,ಬಿ.ಕೆ.ವಿರುಪಾಕ್ಷಿ ಮುಂಖಂಡರಾದ ಬಿ.ಸಿದ್ದಪ್ಪ,ಪಿ.ಬ್ರಹ್ಮಯ್ಯ,ನಾಗೇಂದ್ರ,ತಿಪ್ಪೇಸ್ವಾಮಿ, ಭಾವೈಕ್ಯವೆಂಕಟೇಶ,ವಿದ್ಯಾಧರ,ಭಗವಾನ,ಕೆ.ರಮೇಶ,ರಾಜ,ಸೂರ್ಯನಾರಯಣ ಹರಿಜನಕೇರಿ,ಛಲವಾದಿಕೇರಿ ಸೇರಿದಂತೆ 3,4,10,15 ನೇ ವಾರ್ಡಿನ ಯುವಕರು ಪಾಲ್ಗೊಂಡಿದ್ದರು.
Reported By : Channakeshava