ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮೇಣದಾಳ ಗ್ರಾಮದ ರೈತರು ಕರ್ನಾಟಕ ರೈತ ಸಂಘ(AIKKS)
ರಾಜ್ಯ ಅಧ್ಯಕ್ಷರಾದ ಡಿ ಹೆಚ್ ಪೂಜಾರ ನೇತೃತ್ವದಲ್ಲಿ ಸುಮಾರು 40 50 ವರ್ಷಗಳಿಂದ ಮೆಣದಾಳ ಗ್ರಾಮದ ರೈತರು ಸರ್ವೇ ನಂಬರ್ 171. 172 173 175 ಹಾಗೂ 26 18 ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು ಸದರಿ ಸಾಗುವಳಿದಾರರು 1991 1999 ಹಾಗೂ 2018 2022 ಅವಧಿಯಲ್ಲಿ ಫಾರ್ಮ್ ನಂಬರ್ 50 53 57 ಒಂದು ವರ್ಷದ ಹಿಂದೆ ಭೂಮಿ ಮಂಜುಳಾತಿಗಾಗಿ ಅರ್ಜಿ ಸಲ್ಲಿಸಿದ್ದು ಇಲ್ಲಿವರೆಗೂ ಕೂಡ ನಮ್ಮ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದ್ದು ನಮ್ಮ ಕರ್ನಾಟಕ ರೈತ ಸಂಘದಿಂದ ಖಂಡಿಸುತ್ತೇವೆ ಈ ಒಂದು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಕೆ ಆರ್ ಎಸ್ ಸಂಘದ ರಾಜ್ಯಧ್ಯಕ್ಷ ಡಿ ಎಚ್ ಪೂಜಾರ ಮೆಣದಾಳ ಗ್ರಾಮದ ನಾಲ್ಕು ರೈತ ಕುಟುಂಬಗಳು 40 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಪಟ್ಟ ಭೂಮಿಗಾಗಿ ಅರ್ಜಿ ಸಲ್ಲಿಸಿ 4 ವರ್ಷ ಆದರೂ ಇಲ್ಲಿವರೆಗೂ ಅಧಿಕಾರಿಗಳ ನಿರ್ಲಕ್ಷದಿಂದ ಮಂಜೂರು ಮಾಡದೆ ಇರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು ಕಂದಾಯ ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳಿಂದ ತಪ್ಪಿನಿಂದ ಹಾಗೂ ಅರಣ್ಯ ಇಲಾಖೆಯ ಒಕ್ಕಲಿಬ್ಬಿಸುವ ಉನ್ನಾರದಿಂದ ನಾವು ಪ್ರತಿಭಟನೆ ಮಾಡಲು ಬಂದಿದ್ದೇವೆ ಸರ್ವೆ ನಂಬರ್ 174 ಹಾಗೂ 176 ಭೂಮಿಯು 1954 ರಿಂದ 1980 ರವರೆಗೆ ಪಹಣಿಯಲ್ಲಿ ಸರ್ಕಾರಿ ಖಾರೆಜ್ ಖಾತ ಪಡಾ ಎಂದು ನಮದು ಆಗಿದೆ ಅಂದರೆ ಸದರಿ ಭೂಮಿ ರಕ್ಷಿತಾ ಅಥವಾ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವುದಿಲ್ಲ ಇದು ಪಕ್ಕ ಸರ್ಕಾರಿ ಭೂಮಿಯಾಗಿದೆ ಹೀಗಿದ್ದರೂ ಕೂಡ ಸಾಗುವಳಿದಾರ ರೈತರನ್ನು ಭೂಮಿಯಿಂದ ಒಕ್ಕಲಿಬ್ಬಿಸಲು ಮುಂದಾಗಿರುವುದು ಸರಿಯಲ್ಲ ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯ ಅಧಿಸೂಚನೆ ಹೊರಡುವ ಮೊದಲ ನಮ್ಮ ಬೇಡಿಕೆಗಳು ಈಡೇರಬೇಕು ಇಲ್ಲದಿದ್ದರೆ ಕುಷ್ಟಗಿ ತಹಸಿಲ್ದಾರ್ ಕಾರ್ಯಾಲಯ ಮುಂದೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು ಈ ಒಂದು ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಮಲ್ಲೇಶಗೌಡ ಪೊಲೀಸ್ ಪಾಟೀಲ್ ಜಿಲ್ಲಾ ಉಪಾಧ್ಯಕ್ಷ ದೇವಣ್ಣ ಕಂಬಳಿ ಸಂಘಟಕರಾದ ಸಾಮಿದ್ ಸಾಬ್ ಹುಸೇನಪ್ಪ ರಗಡಪ್ಪ ಪರಶುರಾಮ್ ದುರ್ಗಮ್ಮ ಹುಲಿಗೆಮ್ಮ ಅಂಬಿಕಾ ಇನ್ನೂ ಅನೇಕ ಮಹಿಳಾ ಪ್ರತಿಭಟನೆಕಾರರು ಭಾಗವಹಿಸಿದ್ದರು ನಂತರ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಉಪ ತಹಶೀಲರಾದ ಮುರುಳಿದರಾವ್ ಬೇಡಿಕೆಯ ಮನವಿ ಪತ್ರ ಸ್ವೀಕರಿಸಿ ಶೀಘ್ರದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು ತಾಲೂಕು ದಂಡಾಧಿಕಾರಿಗಳಾದ ರಾಘವೇಂದ್ರರಾವ್ ಕುಲಕರ್ಣಿ ಅವರು ಪ್ರತಿಭಟನೆ ನಡೆಸುತ್ತಿರುವ ಸಂಘಟಕರನ್ನು ಫೋನ್ ಕರೆ ಮಾಡಿ ಪ್ರತಿಭಟನೆ ಹಿಂಪಡೆಯಲು ಮನವೊಲಿಸಿದರು ಬುಧವಾರ ರಂದು ಸಂಬಂಧಪಟ್ಟಂತ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಸಭೆಯನ್ನು ಕರೆದು ಚರ್ಚಿಸಲಾಗುವುದೆಂದು ಭರವಸೆ ನೀಡಿದರು.
ವರದಿ : ಮಲ್ಲಿಕಾರ್ಜುನ ದೋಟಿಹಾಳ