Mandya-ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ  ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು  ಪಟ್ಟಣದ ರಾಮದಾಸ್ ಹೋಟೇಲ್ ಮೇಲ್ಬಾಗದ ಸುಲೋಚನಮ್ಮ ಸಭಾಂಗಣದಲ್ಲಿ ಅದ್ದೂರಿಯಾಗಿ ನೆಡೆಯಿತು
ಕೃಷ್ಣರಾಜಪೇಟೆ  ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮವು ರಾಜ್ಯಾಧ್ಯಕ್ಷರಾದ ಕಲಾವಿದ ವಿಷ್ಣು ರವರ ಅಧ್ಯಕ್ಷತೆಯಲ್ಲಿ ಹಾಗೂ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸನಾತನ ಧರ್ಮರತ್ನಾಕರ,ಪರಮ ಪೂಜ್ಯ ಶ್ರೀ ವಿದ್ಯಾನಂದ ತೀರ್ಥರು ಮಾದೇಶ್ ಗುರೂಜೀ ಹಾಗೂ ಉದ್ಘಾಟನೆ ಮಾಜಿ ಶಾಸಕರಾದ ಡಾ.ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕಿಕ್ಕೇರಿ ಸುರೇಶ್, ಜೆ.ಡಿ.ಎಸ್ ಪಕ್ಷದ ಘೋಷಿತ ಅಭ್ಯರ್ಥಿ ಹೆಚ್ ಟಿ ಮಂಜು, ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷ ಬಿ.ಎಂ ಕಿರಣ್  ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಸಾಧಕರಿಗೆ "ಕಾಯಕಯೋಗಿ ಪ್ರಶಸ್ತಿ"
ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರುಗಳಾದ 
 ಎಂ.ಬಿ.ರುದ್ರಮುನಿ ಸ್ವಾಮೀಜಿ, ಮೊಟ್ಟೆಮಂಜು,ಯೋಗೇಶ್ ಮಾರೇನಹಳ್ಳಿ, ಡಾ.ಶ್ರೀಕಾಂತ್ ಚಿಮಲ್,ಕೆಬಿಸಿ ಮಂಜುನಾಥ್, ಜಯರಾಮೇಗೌಡ , ಶ್ರೀಮತಿ ಮಮತಾ ಶೆಟ್ಟಿ, ಮಾರೇನಹಳ್ಳಿ ಲೋಕೇಶ್, ರಾಮಣ್ಣ ಹೊಸಹೊಳಲು, ರವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯದ್ಯಕ್ಷರಾದ ಕಲಾವಿಧ ವಿಷ್ಣು, ಸಂಸ್ಥಾಪಕರಾದ ಎಂ‌.ಎಸ್ ಮಣಿ, ಜಿಲ್ಲಾದ್ಯಕ್ಷ ಎಂ ಶಿವಕುಮಾರ್, ಎಂ.ಎಸ್ ಸಿದ್ದರಾಜು, ಕೆ ಆರ್ ಪೇಟೆ ಘಟಕದ ಅದ್ಯಕ್ಷರಾದ ಸತೀಶ್, ಗೌರವದ್ಯಕ್ಷ ಕೆ.ಎದ್ ಚಂದ್ರು, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಸೇರಿದಂತೆ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿದರು,

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">