Maski : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಭದ್ರತೆ ಸಿಗಲಿದೆ ಶಾಸಕ ಆರ್ ಬಸನಗೌಡ ತುರ್ವಿಹಾಳ


ಮಸ್ಕಿವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ತುರ್ವಿಹಾಳ ಪಟ್ಟಣದಲ್ಲಿ ರವಿವಾರ ವಿವಿಧ ವಾರ್ಡುಗಳಿ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ಶಾಸಕ ಆರ್ ಬಸನಗೌಡ ತುರ್ವಿಹಾಳ ವಿತರಣೆ ಮಾಡಿದರು. 

ನಂತರ ಮಾತನಾಡಿದ ಅವರು ಕಾಂಗ್ರೆಸ್ಆಡಡಳಿತದಲ್ಲಿ ಯಾರು ಉಪವಾಸ ಮಲಗ ಬಾರದೆಂದು ಅಕ್ಕಿ,ಅಪೌಷ್ಟಿಕತೆ ಹೋಗ ಲಾಡಿಸಲು ಬಾಣಂತಿಯರಿಗೆ ಪೋಷ್ಟಿಕಾಂಶದ ಅಹಾರ ನೀಡಿದ್ದು ಕಾಂಗ್ರೆಸ್‌ ಸರ್ಕಾರ, ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಗ್ಯಾಸ್ ಬೆಲೆ 1300 ರೂ ಆಗುತ್ತಿರಲಿಲ್ಲ,ಮತ್ತು ಜನರಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳ ಬಗ್ಗೆ ಮನೆ-ಮನೆಗೆ  ತಿಳಿಸಿ ಕಾಂಗ್ರೆಸ್‌ ಸರ್ಕಾರ ಬಂದರೆ ಮಾತ್ರ ದೇಶದಲ್ಲಿ ಬಡವರಿಗೆ ಭದ್ರತೆ ಸಿಗಲಿದೆ  ಜನರಿಗೆ ಬಿಜೆಪಿ ಸರ್ಕಾರ ಗೆಲ್ಲುವುದಕ್ಕಿಂತ ಮುಂಚೆ ನೀಡಿದ ಭರವಸೆಗಳಾದ ರೈತರ ಆದಾಯ ದ್ವಿಗುಣ, ಉದ್ಯೋಗ ಭರವಸೆ, ಮಹಿಳಾ ಸಂರಕ್ಷಣೆ, ಉಚಿತ ಶಿಕ್ಷಣ ಎಲ್ಲಾ ಸುಳ್ಳು ಹೇಳಿ ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಬದುಕಲಾರದ ದುಸ್ತಿತಿಗೆ ತಂದಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ,ಮನೆಯ ಯಜಮಾನಿಗೆ ರೂ.2000/ ಮತ್ತು ಬಿಪಿಎಲ್ ಕಾರ್ಡ್ ಗೆ 10 ಕೆಜಿ ಅಕ್ಕಿ ಉಚಿತ ಸೇರಿದಂತೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ನಮ್ಮೆಲ್ಲರ ರಕ್ಷಣೆ ಸಾಧ್ಯ ಎಂದರು.

ಮುಂಬರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಲ್ಲನಗೌಡ ದೇವರಮನಿ, ಶಾಮಿದ ಸಾಬ್‌ ಬೌದ್ರಿ, ಪಾರೂಖ್ ಸಾಬ್ ಖಾಜಿ, ಬಾಪುಗೌಡ ದೇವರಮನಿ,ಶಿವನಗೌಡ ರಾಗಲಪರ್ವಿ,ಸಿರಾಜ್ ಪಾಷಾ,ಶರಣಬಸವ ಗಡೆದ,ಶಾಮಿದ್ ಅಲಿ,ಅಭಿಗೌಡ,ಯಲ್ಲಪ್ಪ ಭೋವಿ,ಶಿವಕುಮಾರ್ ಯಾದವ್,ಪಕೀರಪ್ಪ ಭಂಗಿ,ಅರವಿಂದ ರೆಡ್ಡಿ,ಶಂಕರಗೌಡ ದೇವರಮನಿ,ಕರಿಯಪ್ಪ ಟೈಲರ್ ಮಾಹತೇಶ ಸಜ್ಜನ ಮರಿಯಪ್ಪ ಶಿಕ್ಷಕರು,ಶರಣಪ್ಪ ಉದ್ಬಳ,ಕೊಮರೇಪ್ಪ ಪವಾಡಶೆಟ್ಟಿ,ಭೀಮದಾಸ ದಾಸರ,ಹೋನ್ನುರಪ್ಪ ಕುಂಬಾರ,ಹಾಗೂ ಊರಿನ ಹಿರಿಯರು ಸಾರ್ವಜನಿಕರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.


ರಿಪೋರ್ಟರ್ ಮೆಹಬೂಬ ಮೋಮಿನ

Previous Post Next Post

Contact Form

f="https://unpkg.com/video.js/dist/video-js.css" rel="stylesheet">