Kampli : ಮತದಾನದಿಂದ ಯಾರೂ ವಂಚಿತರಾಗಬಾರದು – ಎಸ್‌ಐಆರ್ ಮ್ಯಾಪಿಂಗ್‌ಗಾಗಿ ಎಸ್‌ಡಿಪಿಐ ಸಹಾಯ ಕೇಂದ್ರ ಆರಂಭ



ಮತದಾನದಿಂದ ಯಾರೂ ವಂಚಿತರಾಗಬಾರದು – ಎಸ್‌ಐಆರ್ ಮ್ಯಾಪಿಂಗ್‌ಗಾಗಿ ಎಸ್‌ಡಿಪಿಐ ಸಹಾಯ ಕೇಂದ್ರ ಆರಂಭ

ಕಂಪ್ಲಿ: ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಸಾಕಾರಗೊಳಿಸುವ ಉದ್ದೇಶದಿಂದ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಮ್ಯಾಪಿಂಗ್ ಕಾರ್ಯಕ್ಕೆ ನೆರವು ನೀಡಲು ಎಸ್‌ಡಿಪಿಐ (ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ವತಿಯಿಂದ ಸಹಾಯ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಎಸ್‌ಡಿಪಿಐ ಕ್ಷೇತ್ರ ಉಪಾಧ್ಯಕ್ಷ ಮಹಮ್ಮದ್ ರಫಿಕ್ ಹೇಳಿದರು.

ಪಟ್ಟಣದ 2ನೇ ವಾರ್ಡ್‌ನ ಉರ್ದು ಸಹಿಪ್ರಾ ಶಾಲೆ ಬಳಿ ಭಾನುವಾರ ಎಸ್‌ಐಆರ್ ಮ್ಯಾಪಿಂಗ್ ಸಹಾಯ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಆಶಯದಂತೆ ಯಾರೂ ಮತದಾನದಿಂದ ವಂಚಿತರಾಗಬಾರದು ಎಂದರು. ದೇಶದ ವಿವಿಧ ಭಾಗಗಳಲ್ಲಿ ಎಸ್‌ಐಆರ್ ಮ್ಯಾಪಿಂಗ್ ಕಾರ್ಯದಲ್ಲಿ ಬಿಎಲ್‌ಒಗಳು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಹಾಗೂ ಅನಾರೋಗ್ಯಕ್ಕೆ ಒಳಗಾದ ಘಟನೆಗಳು ನಡೆದಿರುವುದನ್ನು ಗಮನಿಸಿ, ಪಟ್ಟಣದ 23 ವಾರ್ಡ್‌ಗಳ ಬಿಎಲ್‌ಒಗಳಿಗೆ ಮ್ಯಾಪಿಂಗ್ ಕಾರ್ಯದಲ್ಲಿ ನೆರವು ನೀಡಲು ಈ ಸಹಾಯ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

2002 ಮತ್ತು 2025ರ ಮತದಾರ ಪಟ್ಟಿಗಳನ್ನು ಹೋಲಿಕೆ ಮಾಡಿ, 2002ರ ಪಟ್ಟಿಯಲ್ಲಿರುವ ಮತದಾರರ ತಂದೆ–ತಾಯಿಗಳ ಹೆಸರುಗಳನ್ನು 2025ರ ಪಟ್ಟಿಯ ಮಕ್ಕಳಿಗೆ ಸೇರಿಸುವ ಕಾರ್ಯ ನಡೆಯಲಿದೆ. ಬಹುತೇಕ ಮತದಾರರ ಬಳಿ ಮತದಾರ ಗುರುತಿನ ಚೀಟಿ ಇದ್ದರೂ ಮತದಾರ ಪಟ್ಟಿಯಲ್ಲಿ ಹೆಸರುಗಳಿಲ್ಲದಿರುವುದು ಕಂಡುಬಂದಿದೆ. ಆದ್ದರಿಂದ ಯಾವುದೇ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಎಸ್‌ಐಆರ್ ಮ್ಯಾಪಿಂಗ್ ಕಾರ್ಯಕ್ಕೆ ಮತದಾರರ ಸಹಕಾರ ಅತ್ಯಗತ್ಯವಾಗಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಎಲ್‌ಒ ಕೆ. ಮೌಲಾಬಿ, ಎಸ್‌ಡಿಪಿಐ ಕ್ಷೇತ್ರಾಧ್ಯಕ್ಷ ಇಮ್ರಾನ್ ಖಾನ್, 2ನೇ ವಾರ್ಡ್ ಅಧ್ಯಕ್ಷರಾದ ಪಿ. ಅಬೂಬೂಕ್ಕರ್, ವಿ. ರಾಜಸಾಬ್ ಹಾಗೂ ಪದಾಧಿಕಾರಿಗಳಾದ ಎಂ.ಪಿ. ಹುಸೇನ್ ಬಾಷ, ಉಮರ್, ಹಾರೀಫ್, ಉಸ್ಮಾನ್ ತೋಹಿದ್, ಸಾಧಿಕ್, ಮನ್ಸೂರ್, ಮುರ್ತುಜಾ ಖಾದ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಸುದ್ದಿ ಮೂಲ: ಸಿದ್ದಿ ಟಿವಿ, ಕಂಪ್ಲಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">