Nimbalageri : ಸ್ವಾಭಿಮಾನಿ ಶಾಲಾ ಪ್ರಶಸ್ತಿ ಸಂಭ್ರಮ, ವಿಜ್ಞಾನ ದಿನಾಚರಣೆ, ಎ.ಟಿ.ಏಲ್.ಕಮ್ಯುನಿಟಿ ಡೇ

ನಿಂಬಳಗೇರಿ:ಸ್ವಾಭಿಮಾನಿ ಶಾಲಾ ಪ್ರಶಸ್ತಿ ಸಂಭ್ರಮ, ವಿಜ್ಞಾನ ದಿನಾಚರಣೆ, ಎ.ಟಿ.ಏಲ್.ಕಮ್ಯುನಿಟಿ ಡೇ 
ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು, ನಿಂಬಳಗೆರೆ ಸರಕಾರಿ ಪ್ರೌಢಶಾಲೆಯಲ್ಲಿ. ಮಾ6ರಂದು ಸ್ವಾಭಿಮಾನಿ ಶಾಲಾ ಪ್ರಶಸ್ತಿ ಸಂಭ್ರಮ, ವಿಜ್ಞಾನ ದಿನಾಚರಣೆ, ಎ.ಟಿ.ಏಲ್.ಕಮ್ಯುನಿಟಿ ಡೇ ಆಚರಿಸಲಾಯಿತು. ಶಾಲೆ ಮುಖ್ಯ ಶಿಕ್ಷಕ ಪಕ್ಕೀರಪ್ಪ, ಕಾರ್ಯಕ್ರಮದ ಅಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಬೆಂಗಳೂರಿನ ಇಸ್ರೋದ ಖ್ಯಾತ ವಿಜ್ಞಾನಿ, ಹಾಗೂ ಉಪನಿರ್ಧೇಶಕರಾದ ಡಾಕ್ಟರ್ ವಿ. ಗಿರೀಶ್  ಉಪ ನ್ಯಾಸನೀಡಿ  ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ವಿಜ್ಞಾನದ  ಮಹತ್ವವನ್ನು ಹಾಗೂ ಸಮಾಜಕ್ಕೆ ವಿಜ್ಞಾನದ ಕೊಡುಗೆಯ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ, ಊರಿನ ಮುಖಂಡರಿಗೆ, ಶಾಲೆಯ ಎಲ್ಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು. 
 ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ, ಅಕ್ಷರ ದಾಸೋಹ ಸಾಹಾಯಕ ನಿರ್ಧೇಶಕ ಕೆ.ಜಿ.ಆಂಜನೇಯ, ಗ್ರಾಮ ಪಂಚಾಯತಿ ಅಧ್ಯಕ್ಷ ಬುಡ್ರಿ  ಗಂಗಮ್ಮ ಮಹಾಂತೇಶ್, ಶಾಲಾ ಭೂದಾನಿ ಕೊಟ್ರೇಶಪ್ಪ, ಜಿ.ಎಂ.ಸಿ.ಟ್ರಸ್ಟ್ ಗುರುಸಿದ್ಧ ಸ್ವಾಮಿ, ಎಸ್.ಡಿ ಎಂ.ಸಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳೂ ಸರ್ವ ಸದಸ್ಯರು, ಸ್ವಾಮಿ ವಿವೇಕಾನಂದ ಟ್ರಸ್ಟ್, ನಿಂಬಳಗೆರೆ ಗ್ರಾಮದ  ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಪತ್ರೇಶ್ ಸ್ವಾಗತಿಸಿದರು.
ವರದಿ :  ವಿ.ಜಿ.ವೃಷಭೇಂದ್ರ 
Previous Post Next Post

Contact Form

f="https://unpkg.com/video.js/dist/video-js.css" rel="stylesheet">