ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಯುಗಾದಿ ನಿಮಿತ್ಯ ಯುವಕರು, ಚಿಣ್ಣರು ಮಾತ್ರವಲ್ಲದೇ ಹಿರಿಯರು ಮತ್ತು ಮಹಿಳೆಯರು ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬದ ಸಂಭ್ರಮ ಸವಿದರು.
ಯುವಕರು ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿ, ಅವರನ್ನು ಹೊರಗೆ ಕರೆ ತಂದು ಬಣ್ಣ ಹಾಕುತ್ತಿದ್ದರು. ಪರ ಊರಿನಿಂದ ಬಂದವರು ತಮ್ಮ ಗೆಳೆಯರು ಮತ್ತು ಆತ್ಮೀಯರನ್ನು ಸಂಪರ್ಕಿಸಿ ಬಣ್ಣ ವಿನಿಮಯ ಮಾಡಿಕೊಂಡರು.
ಕೆಲವು ಪ್ರಮುಖ ಸ್ಥಳಗಳಲ್ಲಿ ಯುವಕರು ಗುಂಪುಗೂಡಿ ಬಣ್ಣ ಹಚ್ಚುತ್ತಿರುವುದು ಇನ್ನಿತರ ಕಡೆಗಳಲ್ಲಿ ಯುವಕರು ಮೈಮೇಲಿನ ಬಟ್ಟೆ ಬಿಚ್ಚಿ ಮನಬಂದಂತೆ ಚೀರಾಡುತ್ತ ಆಚರಿಸಿದರು.
ಇತ್ತ ಮಕ್ಕಳು ಕೂಡ ಮನೆಯ ಮುಂದೆ ನಿಂತು ತಮ್ಮ ಕೈಯ್ಯಲ್ಲಿನ ಪಿಚಕಾರಿಯಿಂದ ಬಣ್ಣ ಚಿಮುಕಿಸುತ್ತಿದ್ದರು. ಮಹಿಳೆಯರು ಕೂಡ ತಮ್ಮ ಅಕ್ಕಪಕ್ಕದ ಮನೆಯವರು ಮತ್ತು ಆತ್ಮೀಯರ ಜೊತೆ ಸೇರಿ ಬಣ್ಣದಾಟದಲ್ಲಿ ಭಾಗವಹಿಸಿದ್ದರು.
ಹಿರಿಯರು ಸಹ ಪರಸ್ಪರ ಬಣ್ಣ ವಿನಿಮಯ ಮಾಡಿಕೊಳ್ಳುತ್ತ ತಮ್ಮ ಬಾಲ್ಯದ ದಿನಗಳಂತೆ ವರ್ತಿಸುತ್ತಿದ್ದುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಬಸವರಾಜ ಡಣಾಪುರ, ಸೊಮು ಮಾದಾಪುರ, ಕುಮಾರ್, ಸುಕುಮುನಿ, ಮುತ್ತು ಪಾಟೀಲ್, ಬಸವರಾಜ ಹತ್ತಿಗುಡ್ಡ, ಬಸವರಾಜ ಮಾದಾಪುರ, ಅಮರೇಶ ಸಜ್ಜನ್ ಮತ್ತು ಇನ್ನಿತರರು ಯುವಕರಿದ್ದರು.
ರಿಪೋರ್ಟರ್ ಮೆಹಬೂಬ ಮೋಮಿನ.