ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ನಾಳೆಯಿಂದ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ಆಗಲಿದ್ದು, ಅನಿರ್ದಿಷ್ಟಾವಧಿ ಮುಷ್ಕರ ಇದಾಗಲಿದೆ.
ಮಾರ್ಚ್ 21ರಂದು ಪ್ರತಿಭಟನೆಗೆ ಸಾರಿಗೆ ನೌಕರರು ಮುಂದಾಗಿದ್ದರು, ಆದರೆ ೧೫% ವೇತನ ಹೆಚ್ಚಳಕ್ಕೆ ಸರ್ಕಾರ ಆದೇಶ ನೀಡಿದ್ದರಿಂದ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಇದೀಗ ಮತ್ತೆ ಸಾರಿಗೆ ಮುಷ್ಕರ ನಡೆಸಲು ತಯಾರಿ ನಡೆದಿದ್ದು, ಸಾಕಷ್ಟು ಬೇಡಿಕೆಗಳಿವೆ.
ಸರ್ಕಾರಿ ನೌಕರರ ಸಮಾನ ವೇತನ, ನಾಲ್ಕು ನಿಗಮಗಳ ನೌಕರರ ಸಂಘಕ್ಕೆ ಚುನಾವಣೆ, ಮುಷ್ಕರದ ಸಮಯದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿ, ಮುಷ್ಕರದ ಸಮಯದಲ್ಲಿ ದಾಖಲಾದ ಪೊಲೀಸ್ ಪ್ರಕರಣ ಹಿಂಪಡೆಯಬೇಕು, ನಿವೃತ್ತ ನೌಕರರಿಗೆ ಬಾಕಿ ಇರುವ ಹಣ ನೀಡಬೇಕು, ಸೂಕ್ತ ಪಿಂಚಣಿ ಸೌಲಭ್ಯ ಬೇಕು ಎನ್ನುವುದು ಇವರ ಬೇಡಿಕೆಗಳಾಗಿವೆ.
ವರದಿ : ಬಸವರಾಜ ಕಬಡ್ಡಿ
Tags
ರಾಜ್ಯ