ಓಬಳಶೆಟ್ಟಿಹಳ್ಳಿ:ಆಕಸ್ಮಿಕ ಬೆಂಕಿಗೆ ಅಪಾರ ಮೇವು ಭಸ್ಮ
ವಿಜಯನಗರ : ಜಿಲ್ಲೆ ಕೂಡ್ಲಿಗಿ ತಾಲೂಕು, ಗುಡೇಕೋಟೆ ಹೋಬಳಿ ಓಬಳಶೆಟ್ಟಿಹಳ್ಳಿ ಗ್ರಾಮದಲ್ಲಿ. ಅಕಸ್ಮಿಕ ಬೆಂಕಿ ಅವಘಡಕ್ಕೆ ಅಪಾರ ಮೇವು ಭಸ್ಮವಾಗಿರುವ ಘಟನೆ, ಮಾ10ರಂದು ಮಧ್ಯರಾತ್ರಿ ಜರುಗಿದೆ. ಮಧ್ಯರಾತ್ರಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಯಿಂದಾಗಿ ಗ್ರಾಮಸ್ಥರು ಬೆಚ್ಚಿದ್ದಾರೆ. ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಮಾಡಿದ್ದಾರೆ,
ಮತ್ತು ಕೂಡಲೇ ಅಗ್ನಿ ಶಾಮಕ ದಳದವನ್ನು ಸಂಪರ್ಕಿಸಿದ್ದಾರೆ. ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ, ಬಾರೀ ಬೆಂಕಿಗೆ ರೈತರು ಸಂಗ್ರಹಿಸಿಟ್ಟಿದ್ದ, ಅಪಾರ ಬೆಲೆ ಬಾಳುವ ಮೇವಿನ ಬಣವಿಗಳು ಸಂಪೂರ್ಣ ಸುಟ್ಟಿ ನಾಶವಾಗಿವೆ. ಗ್ರಾಮದ ಶಿವರಾಜಪ್ಪ ತಂದೆ ಗಂಗಪ್ಪನವರಿಗೆ ಸೇರಿದ , 5ಟ್ರಾಕ್ಟ್ ರ್ ಮೆಕ್ಕೆಜೋಳದ ಸಪ್ಪೆ ಮತ್ತು 3 ಗಾಡಿ ಕಡಲೆ ಹುಬ್ಬಲಿನ ಮೇವು ಸುಟ್ಟಿದೆ. ತಿಪ್ಪೇಸ್ವಾಮಿ ತಂದೆ ಕುಂಟು ದಾಸಪ್ಪನವರಿಗೆ ಸೇರಿದ, 2 ಟ್ರಾಕ್ಟ್ ರ್ ಮೆಕ್ಕೆಜೋಳದ ಸಪ್ಪೆ ಮತ್ತು 2 ಗಾಡಿ ಕಡಲೆ ಹುಬ್ಬಲು ಸುಟ್ಟಿದೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ, ಘಟನಾ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭಟ್ಟಿ ನೀಡಿ ಪರಿಶೀಲಿಸಬೆಕಿದೆ.
ಕಂದಾಯ ಇಲಾಖಾಧಿಕಾರಿಗಳು ಮೇವು ಕಳೆದು ಕೊಂಡ ರೈತರಿಗೆ, ಸೂಕ್ತ ನಷ್ಟ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Tags
ಟಾಪ್ ನ್ಯೂಸ್