ಮಹಿಳೆಯರು ಬಹುರೂಪವಾಗಿ ಸಮಾಜದಲ್ಲಿಗುರುತಿಸಿಕೊಳ್ಳಬೇಕು ಸುಲೋಚನ ಅತಿಥಿ ಉಪನ್ಯಾಸಕರು.
ಸಿಂಧನೂರ :
ಸಿಂಧನೂರನ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಸುಲೋಚನ ಅತಿಥಿ ಉಪನ್ಯಾಸಕರು ವೃಕ್ಷಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿ
ಮಾತನಾಡಿದ ಅವರು ಮಹಿಳೆ ಸಬಲೀಕರಣದ ವಿಷಯವಾಗಿ ತಾಯಿಯಾಗಿ. ಸಹೋದರಿಯಾಗಿ ಮಡದಿಯಾಗಿ.ಮಗಳಾಗಿ. ಮೃತರಾದಾಗ. ಭೂತಾಯಿಯಾಗಿ.ಹೀಗೆ ಮಹಿಳೆ ಬಹುರೂಪವಾಗಿ ಸಮಾಜದಲ್ಲಿ ಗುರುತಿಸಬಹುದು, ಆದರೆ ಹಿಂದೆ ಇತಿಹಾಸ ರೂಪಿಸಿದ್ದು ಮಹಿಳೆ ಮುಂದೆ ಇತಿಹಾಸ ರೂಪಿಸುವುದು ಮಹಿಳೆರೆ ಎಂದು ಹೇಳಿದರು.
ನಂತರ ಮಾತನಾಡಿದ ಬಸವರಾಜ್ ಗಲಿಗಿನ ಯೋಜನಾ ವ್ಯವಸ್ಥಾಪಕರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾ ಪಂಚಾಯತ್ ರಾಯಚೂರು ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಗ್ರಾಮೀಣ ಭಾಗದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆರೋಗ್ಯ ಸಮಿತಿ, ಹಾಗೂ ಶೈಕ್ಷಣ ಕ್ಷೇತ್ರದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ,ಹೀಗೆ ಹಲವಾರು ಗ್ರಾಮೀಣ ಸಮಿತಿಗಳಲ್ಲಿ ಭಾಗವಹಿಸಿ ತಮ್ಮ ಸ್ಥಾನಮಾನ ಮತ್ತು ತಮ್ಮ ಇರುವಿಕೆಯನ್ನು ಗುರುತಿಸುವಲ್ಲಿ ಮಹಿಳೆಯರ ಯಶಸ್ವಿಯಾಗಬೇಕೆಂದು ಎಂದರು.
ರಿಪೋರ್ಟರ್ ಮಹೆಬೂಬ ಮೊಮೀನ ಸಿಂಧನೂರ
Tags
ರಾಜ್ಯ