ಹೆಣ್ಣು ನಮ್ಮ ಬಾಳಿನ ಕಣ್ಣು
ಹೆಣ್ಣು ನಮ್ಮ ಜೀವನಕ್ಕೆ ಕಣ್ಣು
ಈ ಭೂಮಿಯಲ್ಲಿ ಹೆಣ್ಣೇ ಶ್ರೇಷ್ಠ
ಹೆಣ್ಣಿಲ್ಲವೆಂದರೆ ಹುಟ್ಟು ಬಲು ಕಷ್ಟ
ಸೃಷ್ಟಿಯ ಕುಲಕ್ಕೆ ಮೂಲವು ಹೆಣ್ಣು
ಮಮಕಾರ ಕರುಣೆಯ ಮನಸು ಹೆಣ್ಣು
ನಿವಾಸಕ್ಕೆ ತಾಯಿಯಾಗಿ..
ಸಕಲವು ಕಲಿಸುವ ಗುರುವಾಗಿ ..
ಮಮತೆಯಲ್ಲಿ ಮಗಳಾಗಿ..
ಅಕ್ಕರೆಯಲ್ಲಿ ಅಕ್ಕಳಾಗಿ..
ತುಂಟಾಟದಲ್ಲಿ ತಂಗಿಯಾಗಿ..
ಸಲುಗೆಯಲ್ಲಿ ಸ್ನೇಹಿತೆಯಾಗಿ..
ಪ್ರೀತಿಯ ಪ್ರೇಯಸಿಯಾಗಿ..
ಮನೆ ಬೆಳಗುವ ಮಹಾಲಕ್ಷ್ಮಿ ಯಾಗಿ..
ಮನತುಂಬುವ ಮಡದಿಯಾಗಿ..
ತಾಳ್ಮೆಯಲ್ಲಿ ತಾಯಿಯಾಗಿ..
ಅಪ್ಪುಗೆಯಲ್ಲಿ ಅಜ್ಜಿಯಾಗಿ..
ಜೀವಮಾನವಿಡೀ ತಮ್ಮವರಿಗಾಗಿ ದುಡಿಯುವ ಕಲ್ಪ ವೃಕ್ಷ ವಾಗಿ..
ಅಂತ ಬ್ರಹ್ಮನನ್ನು ಸೃಷ್ಟಿ ಮಾಡಲು ಒಂದು ಹೆಣ್ಣು ಬೇಕಾಯಿತು..
ಜಗತ್ತನ್ನೆ ಸೃಷ್ಟಿ ಮಾಡುವ ಬ್ರಹ್ಮ ನಿಗಿಂತ ಶ್ರೇಷ್ಠವಾದ ಶಕ್ತಿ ಇರೋದು ಹೆಣ್ಣಿಗೆ ಮಾತ್ರ..
ಅಂತಹ ಶ್ರೇಷ್ಠ ಶಕ್ತಿಯಾದ
ನನ್ನ ಪ್ರೀತಿಯ ಎಲ್ಲ ಅಕ್ಕ - ತಂಗಿಯರಿಗೆ, ತಾಯಂದಿರಿಗೆ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Siddi Tv