Kukanuru-ಜಗದ್ಗುರು ರೇಣುಕಾಚಾರ್ಯರ ಅದ್ದೂರಿ ಜಯಂತಿ ಆಚರಣೆ

ಜಗದ್ಗುರು ರೇಣುಕಾಚಾರ್ಯರ ಅದ್ದೂರಿ ಜಯಂತಿ ಆಚರಣೆ

ಕುಕನೂರು  : ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಕುಕನೂರು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಕುಕನೂರು ತಾಲೂಕು ವೀರಶೈವ ಜಂಗಮ ಸಂಘ ಮತ್ತು ತಾಲೂಕು ಆಡಳಿತ ವತಿಯಿಂದ  ಅನ್ನದಾನಿಶ್ವರ ಮಠದಲ್ಲಿ ಅತ್ಯಂತ ವಿಜೃಂಭಣೆಯಿಂದ ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಯಿತು.
ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಸಚಿವ ಹಾಲಪ್ಪ ಆಚಾರ್ ಅವರು ರೇಣುಕಾಚಾರ್ಯ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಂಗಮ ಸಮಾಜದವರಿಗೆ ಜಯಂತಿಯ ಶುಭಾಶಯ ತಿಳಿಸಿದರು.ನಂತರ ಅನ್ನದಾನಿಶ್ವರ ಮಠದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಭಾಗವಹಿಸಿ ಉತ್ತಮ ಸಮಾಜ ಕಟ್ಟಲು ಜಂಗಮರ  ಕೊಡುಗೆ ಅಪಾರ.ಸಂಸ್ಕಾರ ಮತ್ತು ಸನ್ಮಾರ್ಗ ಎಲ್ಲರೂ ರೂಡಿಸಿಕೊಳ್ಳಬೇಕಾಗಿದೆ ಎಂದರು

ದಿವ್ಯ ಸಾನಿಧ್ಯ ವಹಿಸಿದ್ದ ಕುದರಿಮೋತಿ ಶ್ರೀ ವಿಜಯ ಮಹಾಂತ ಸ್ವಾಮೀಜಿಗಳು ಮಾತನಾಡಿ, ಎಲ್ಲರೂ ಲಿಂಗದೀಕ್ಷೆ ಪಡೆಯಿರಿ, ಸಂಸ್ಕಾರವಂತರಾಗಿ, ಜಂಗಮರಿಗೆ ಯಾವುದೇ ಜಾತಿ ಎಂಬುದಿಲ್ಲ ಅವರು ಯಾರೇ ಕರೆದರೂ ಅವರ ಮನೆಗೆ ಹೋಗಿ 
ಪೂಜಾ ಕೈಂಕರ್ಯ ನಿರ್ವಹಿಸಿ ನಿಜವಾದ ಜಾತ್ಯತೀತರೆನಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಶ್ರೀಧರ ಮುರಡಿ ಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿಗಳು, ಅರಳೆಲೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಮೈನಳ್ಳಿ ಮಠದ ಸಿದ್ದೇಶ್ವರ ಸ್ವಾಮೀಜಿಗಳು, ಚನ್ನಬಸವ ಸ್ವಾಮೀಜಿಗಳು ಅನ್ನದಾನಿಶ್ವರ ಮಠದ ಮಹಾದೇವ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಉಪ ತಹಸೀಲ್ದಾರ್ ಬಸವರಾಜ್ ಮಡಿವಾಳರ,ಜಂಗಮ ಸಮಾಜದ ಪ್ರಮುಖರಾದ ಶಾಂತವಿರಯ್ಯ ಲಕಮಪುರಾಮಠ, ವೀರಯ್ಯ ತೊಂಟಾದರ್ಯ, ಮಹೇಶ್ ಕಲ್ಮಠ, ಹರೀಶ್ ಹಿರೇಮಠ, ಹಂಪಯ್ಯ ಸ್ವಾಮಿ ಕೊಪ್ಪಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಈರಯ್ಯ ಕುರ್ತಕೋಟಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">