189 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ರಿಲೀಸ್ 52 ಹೊಸ ಮುಖಗಳಿಗೆ ಟಿಕೆಟ್
ಲಕ್ಷ್ಮಣ್ ಸವದಿಗೆ ಟಿಕೆಟ್ ಮಿಸ್
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದ್ದು. ಹಲವು ಬದಲಾವಣೆಗೆ ಕಾರಣವಾಗಿದೆ.
189 ಅಭ್ಯರ್ಥಿಗಳ ಲಿಸ್ಟ್ ನಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ.ಇಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇoದ್ರ ಪ್ರಧಾನ್, ಅಣ್ಣಾ ಮಲೈ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ 189 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು
ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳ ಟಿಕೆಟ್ ಘೋಷಣೆ ಆಗಿದೆ, ಯಲಬುರ್ಗಾ ಕ್ಕೆ ಹಾಲಪ್ಪ ಆಚಾರ್, ಕುಷ್ಟಗಿಯಿಂದ ದೊಡ್ಡನಗೌಡ ಪಾಟೀಲ್, ಕನಕಗಿರಿ ಯಿಂದ ಬಸವರಾಜ್ ದಾಡೆಸುಗುರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪಳ ಕ್ಷೇತ್ರ, ಗಂಗಾವತಿ ಎರಡು ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ,
ಉಳಿದಂತೆ ಬೆಳಗಾವಿಯ ಲಿಂಗಾಯತ ಸಮಾಜದ ಪ್ರಬಲ ನಾಯಕ ಲಕ್ಷ್ಮಣ್ ಸವದಿಗೆ ಟಿಕೆಟ್ ಮಿಸ್ ಆಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆರ್ ಅಶೋಕ್ ಮತ್ತು ವಿ ಸೋಮಣ್ಣ ಇಬ್ಬರಿಗೂ ಎರಡು ಕಡೆ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡಿದೆ. ವಿ. ಸೋಮಣ್ಣ ಚಾಮರಾಜನಗರದಿಂದ ಮತ್ತು ಸಿದ್ದರಾಮಯ್ಯ ಸ್ಪರ್ದಿಸುವ ವರುಣಾ ದಿಂದ ಟಿಕೆಟ್ ಸಿಕ್ಕಿದೆ.
ವರುಣಾದಲ್ಲಿ ಸಿದ್ದರಾಮಯ್ಯ ವರ್ಸೆಸ್ ವಿ. ಸೋಮಣ್ಣ ಅಖಾಡಕ್ಕೆ ವೇದಿಕೆ ಸಜ್ಜಾಗಿದೆ.
ಆರ್ ಅಶೋಕ್ ಪದ್ಮನಾಭ ಕ್ಷೇತ್ರದ ಜೊತೆಗೆ ಡಿ. ಕೆ. ಶಿವಕುಮಾರ್ ವಿರುದ್ದ ಸ್ಪರ್ಧೆ ಮಾಡಲು ಬಿಜೆಪಿ ಕನಕಪುರದಿಂದ ಕಣಕ್ಕಿಳಿಸಿದೆ.
ಹೊಳಲ್ಕೆರೆ. ಎಂ ಚಂದ್ರಪ್ಪ
ಹೊಸದುರ್ಗ. ಎಸ್ ಲಿಂಗಮೂರ್ತಿ
ಚಿತ್ರದುರ್ಗ. ತಿಪ್ಪಾರೆಡ್ಡಿ
ಚಳ್ಳಕೆರೆ. ಅನಿಲಕುಮಾರ
ಹಿರಿಯೂರು. ಪೂರ್ಣಿಮಾ ಶ್ರೀನಿವಾಸ್
ಮೊಳಕಾಲ್ಮೂರು. ತಿಪ್ಪೇಸ್ವಾಮಿ
ವರದಿ : ಈರಯ್ಯ ಕುರ್ತಕೋಟಿ