Congress: ಕಂಪ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೆ.ಎನ್.ಗಣೇಶ ಪ್ರಚಾರ ಮತಯಾಚನೆ

ಕಂಪ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೆ.ಎನ್.ಗಣೇಶ ಪ್ರಚಾರ ಮತಯಾಚನೆ 

ಕಂಪ್ಲಿ,ಏ.27-ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್.ಗಣೇಶ ಅವರು ವಿವಿಧ ಗ್ರಾಮಗಳಾದ ಸಣಾಪುರ,ಇಂದಿರಾನಗರಕ್ಯಾಂಪ್,ಅರಳಿಹಳ್ಳಿ, ಬೇಳಗೋಡು,ಬಸವೇಶ್ವರ ಕ್ಯಾಂಪ್,ರಾಮದೇವರ  ಕ್ಯಾಂಪ್,ಮಾರೆಮ್ಮಾ ಕ್ಯಾಂಪ್,ಇಟಗಿ, ನಂ.2.ಮುದ್ದಾಪುರ,ಕೊಂಡಯ್ಯ ಕ್ಯಾಂಪ್ ಗಳಲ್ಲಿ ಪ್ರಚಾರಕಾರ್ಯ ಮತಯಾಚನೆ  ನಡೆಸಿದರು.
ಕಾರ್ಯಕರ್ತರ  ನೇತೃತ್ವದಲ್ಲಿ ವಿವಿಧೆಡೆ ಪ್ರಚಾರ ಕಾರ್ಯ ನಡೆಸಲಾಗಿದ್ದು ನಿಮ್ಮ ಸೇವೆಗೆ ಉತ್ಸಾಹ ಹೊಂದಿದ್ದೇನೆ. ಎಲ್ಲರೂ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು. ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ನೀವೆಲ್ಲ ನನಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸರಾವ್(ವಾಸಪ್ಪ),ಷಣ್ಮುಖಪ್ಪ,ಜಾಫರ್,ನಬಿ,ಹನುಮಂತಪ್ಪ,ವಿರೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ : ಚನ್ನಕೇಶವ
Previous Post Next Post

Contact Form

f="https://unpkg.com/video.js/dist/video-js.css" rel="stylesheet">