Dr B R Ambedkar Jayanti :ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ವರ್ಗಗಳ ಬಾಳಿನ ಬೆಳಕು..ಕೆ.ಆರ್.ಪೇಟೆ ತಹಶೀಲ್ದಾರ್ ನಿಸರ್ಗಪ್ರಿಯಾ ಅಭಿಮತ


ಮಹಾನಾಯಕ, ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ವರ್ಗಗಳ ಬಾಳಿನ ಬೆಳಕು..ಕೆ.ಆರ್.ಪೇಟೆ ತಹಶೀಲ್ದಾರ್ ನಿಸರ್ಗಪ್ರಿಯಾ ಅಭಿಮತ

ಸಂವಿಧಾನಶಿಲ್ಪಿ,  ಮಹಾನಾಯಕ, ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು..


ತಹಶೀಲ್ದಾರ್ ನಿಸರ್ಗಪ್ರಿಯಾ, ಕ್ಷೇತ್ರಶಿಕ್ಷಣಾಧಿಕಾರಿ ಸೀತಾರಾಮ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೆಂಕಟೇಶ್ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಸಂವಿಧಾನಶಿಲ್ಪಿಯ ಭಾವಚಿತ್ರಕ್ಕೆ ಪೂಜೆಮಾಡಿ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು..


ತಹಶೀಲ್ದಾರ್ ನಿಸರ್ಗಪ್ರಿಯಾ ಮಾತನಾಡಿ ತುಳಿತಕ್ಕೊಳದ ಜನರ ಚೇತನವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಮಾನ್ಯ ನಾಯಕರಾಗಿದ್ದಾರೆ.  ಮಹಿಳಾ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಒತ್ತು ನೀಡಿ ಸರ್ವಜನಾಂದವರೂ ನೆಮ್ಮದಿಯ ಜೀವನ ನಡೆಸಲು ವರದಾನವಾಗಿರುವ ಸಂವಿಧಾನವನ್ನು ನಮಗೆ ಕೊಡುಗೆಯಾಗಿ ನೀಡಿರುವ ಮಹಾತ್ಮರಾಗಿದ್ದಾರೆ ಎಂದು ಗುಣಗಾನ ಮಾಡಿದರು..


ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮ್ ಮಾತನಾಡಿ ಅಂಬೇಡ್ಕರ್ ಶೋಷಿತ ವರ್ಗಗಳು ಮಾತ್ರವಾಲ್ಲದೇ ತುಳಿತಕ್ಕೊಳಗಾದ ಜನರ ಧೀಶಕ್ತಿಯಾಗಿದ್ದಾರೆ. ಇಂತಹ ಮಹಾನಾಯಕನ ಸಂದೇಶದಂತೆ   ತುಳಿತಕ್ಕೊಳಗಾದ ಜನರು ಸಂಘಟಿತರಾಗಿ ಶಿಕ್ಷಣದ ಜ್ಞಾನವನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ಕರೆ ನೀಡಿದರು..

ವಿಶ್ರಾಂತ ಪ್ರಾಂಶುಪಾಲ ರಾಜಯ್ಯ ಮಾತನಾಡಿ ವಿಶ್ವನಾಯಕರಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆಗಳು ಸಾರ್ವಕಾಲಿಕ ಸತ್ಯವಾಗಿವೆ. ಯುವಜನರು ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ನಡೆಸುವ ಮೂಲಕ ಆರೋಗ್ಯವಂತ ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಮುಖಂಡರಾದ ಸಿಂಧಘಟ್ಟ ಸೋಮಸುಂದರ್, ಡಿ.ಪ್ರೇಮಕುಮಾರ್, ಬಸ್ತಿರಂಗಪ್ಪ, ಮುದುಗೆರೆ ಮಹೇಂದ್ರ, ಮಾಂಬಳ್ಳಿ ಜಯರಾಮ್, ಗಣೇಶ, ಕಿಕ್ಕೇರಿ ರಾಜಣ್ಣ, ಊಚನಹಳ್ಳಿ ನಟರಾಜು, ಶಿವಸ್ವಾಮಿ, ಜೈನಹಳ್ಳಿ ಹರೀಶ್, ಪುರಸಭಾ ಮುಖ್ಯಾಧಿಕಾರಿ ಬಸವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಮಾಜಕಲ್ಯಾಣಾಧಿಕಾರಿ ಮಹೇಶ್ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಚೇತನಕ್ಕೆ ಭಕ್ತಿ ನಮನ ಅರ್ಪಿಸಿದರು.


 ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

Previous Post Next Post

Contact Form

f="https://unpkg.com/video.js/dist/video-js.css" rel="stylesheet">