ಕರ್ನಾಟಕ ರಾಜ್ಯ ಶ್ರೀ ಮಾದಾರ ಚೆನ್ನಯ್ಯ ಸಂಘ ಕಂಪ್ಲಿ ತಾಲೂಕು ಘಟಕದ ವತಿಯಿಂದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರು132ನೇ ಜಯಂತಿಯ ಆಚರಣೆ..
ಕಂಪ್ಲಿ ತಾಲೂಕಿನ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ ಸರ್ಕಲ್ ನಲ್ಲಿ ಶುಕ್ರವಾರದಂದು ಶ್ರೀ ಮಾದಾರ ಚೆನ್ನಯ್ಯ ಸಂಘದ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಬಹಳ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಯಿತು...
ಶುಕ್ರವಾರದಂದು ಕರ್ನಾಟಕ ಅಸ್ಪೃಶ್ಯ ವಿಮೋಚನಾ ಸಮಿತಿ ಹಾಗೂ ಶ್ರೀ ಮಾದಾರ ಚನ್ನಯ್ಯ ಸಂಘ ಮತ್ತು ಕಂಪ್ಲಿಯ ಸುತ್ತಮುತ್ತಲಿನ ಎಲ್ಲ ದಲಿತ ಸಮುದಾಯದ ಮುಖಂಡರು, ಹಿರಿಯರು, ಕಿರಿಯರು, ಯುವಕರು ಸೇರಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಮಾತನಾಡಿದ ಶ್ರೀ ಮಾದಾರ ಚೆನ್ನಯ್ಯ ಸಂಘದ ಕಂಪ್ಲಿ ಘಟಕದ ಗೌರವ ಅಧ್ಯಕ್ಷರಾದ ಹೆಚ್ ಪಂಪಾಪತಿ ರವರು ಮಾತನಾಡಿ
ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಭಾರತ ದೇಶದಲ್ಲಿ ಒಂದು ಸಮಾನತೆಗಾಗಿ ಬಹಳಷ್ಟು ಶ್ರಮಪಟ್ಟಿದ್ದಾರೆ... ಇಡೀ ದೇಶ ಸಂವಿಧಾನವು, ನಮ್ಮ ಭಾರತೀಯರಿಗೆ ಬ್ರಿಟಿಷರಿಂದ ಸ್ವಾತಂತ್ರ ಹೇಗೆ ಸಿಕ್ಕಿತು, ಅದೇ ರೀತಿಯಾಗಿ ನಮಗೆ ಸಂವಿಧಾನದಿಂದ ಇಡೀ ಭಾರತ ದೇಶಕ್ಕೆ ಒಂದು ಸಮಾನತೆ ದೊರಕಿದೆ ಹಾಗೂ ಎಲ್ಲಾ ಸಮುದಾಯದವರು ಡಾಕ್ಟರ್ ಬಿ.ಆರ್.ಅಂಬೇಡ್ಕರ್ ರವರನ್ನು ಪೂಜಿಸಬೇಕು ಎಂದು ತಿಳಿಸಿದರು...
ಈ ಸಮಯದಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷರು ಹೆಚ್ ಮರಿಯಪ್ಪನವರು ಮಾತನಾಡಿ ಕಂಪ್ಲಿಯ ಅಂಬೇಡ್ಕರ್ ಸರ್ಕಲ್ ನಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪುತ್ತಳೆ ಮುಂದಿನ ವರ್ಷದ ಒಳಗೆ ಮಾಡಲೇಬೇಕು. ಹಾಗೂ ಕಂಪ್ಲಿಯ ದಲಿತ ಸಮುದಾಯದವರು ಹಾಗೂ ಎಲ್ಲ ಸಂಘ, ಸಂಸ್ಥೆಗಳ ಮುಖಂಡರು ಹಿರಿಯರು ಕಿರಿಯರು ಯುವಕರು ಸೇರಿ ಸರ್ಕಾರದ ಮುಂದೆ ಮನವಿಯನ್ನು ಸಲ್ಲಿಸೋಣ, ಹಾಗೂ ಎಲ್ಲಾ ಸಮುದಾಯದವರು ಸೇರಿ ಮುಂದಿನ ವರ್ಷಕ್ಕೆ ಕಂಪ್ಲಿಯಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿ ನಿರ್ಮಿಸುವ ಬಗ್ಗೆ ಬೈರಂಗವಾಗಿ ಮಾತನಾಡಿದರು.
ಈ ಸಮಯದಲ್ಲಿ ಸಂಘದ ಎಲ್ಲ ಪದಾಧಿಕಾರಿಗಳ ಸಮ್ಮುಖದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸಂಘದ ವತಿಯಿಂದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ ಪುತ್ತಳಿಗೆ ಮುಂದಿನ ದಿನಗಳಲ್ಲಿ 10,101 ರೂಪಾಯಿಗಳನ್ನು ಸಂಘದ ವತಿಯಿಂದ ದೇಣಿಗೆ ನೀಡುತ್ತೇವೆ ಎಂದು ತಿಳಿಸಿದರು...
ಈ ಸಮಯದಲ್ಲಿ ಶ್ರೀ ಮದಾರ ಚೆನ್ನಯ್ಯ ಸಂಘ ಕಂಪ್ಲಿ ಘಟಕದ ಗೌರವಾಧ್ಯಕ್ಷ ಹೆಚ್.ಪಂಪಾಪತಿ, ಅಧ್ಯಕ್ಷರಾದ ಹೆಚ್ ತಿಪ್ಪೇಸ್ವಾಮಿ, ಉಪಾಧ್ಯಕ್ಷರು ಹೆಚ್ ಮರಿಯಪ್ಪ, ಶ್ರೀನಿವಾಸ್, ಸಂಘಟನೆ ಕಾರ್ಯದರ್ಶಿ ಬಸವರಾಜ್ , ಪ್ರಧಾನ ಕಾರ್ಯದರ್ಶಿ ಹೆಚ್.ಗೋಪಿನಾಥ್, ಇನ್ನು ಮುಂತಾದ ಸಂಘದ ಪದಾಧಿಕಾರಿಗಳು ಎಲ್ಲ ದಲಿತ ಸಮುದಾಯದ ಮುಖಂಡರು ಯುವಕರು ಉಪಸ್ಥಿತರಿದ್ದರು...
ವರದಿ : ಚನ್ನಕೇಶವ