Election : ಕೂಡ್ಲಿಗಿ ಗೋವಿಂದಗಿರಿ ಚೆಕ್ ಪೋಸ್ಟ್ ಬಳಿ,ದಾಖಲೆ ಇಲ್ಲದ 2ಲಕ್ಷಕ್ಕೂ ಅಧಿಕ ಹಣ ವಶ

ಕೂಡ್ಲಿಗಿ ಗೋವಿಂದಗಿರಿ ಚೆಕ್ ಪೋಸ್ಟ್ ಬಳಿ,ದಾಖಲೆ ಇಲ್ಲದ 2ಲಕ್ಷಕ್ಕೂ ಅಧಿಕ ಹಣ ವಶ

ವಿಜಯನಗರ ಜಿಲ್ಲೆ :- ಕೂಡ್ಲಿಗಿ ತಾಲೂಕಿನ ಬೈಕಿನಲ್ಲಿ ಸವಾರನೋರ್ವ ತೆಗೆದುಕೊಂಡು ಹೋಗುತ್ತಿದ್ದ 2,43, 400ರೂ ನಗದು ಹಣವನ್ನು ಕೂಡ್ಲಿಗಿ ಹೊರವಲಯದ ಗೋವಿಂದಗಿರಿ ಚೆಕ್ ಪೋಸ್ಟ್ ಬಳಿ ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರು ತಪಾಸಣಾ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ.
ಸಂಡೂರಿನಿಂದ ಕೂಡ್ಲಿಗಿ ಮಾರ್ಗವಾಗಿ ಚಿತ್ರದುರ್ಗ ಕಡೆಗೆ ರಾಘವೇಂದ್ರ ಎಂಬಾತನು ಬೈಕೊಂದರಲ್ಲಿ ಹೋಗುತ್ತಿರುವಾಗ ಚುನಾವಣೆ ಸಂಬಂಧವಾಗಿ ಕೂಡ್ಲಿಗಿ ಹೊರವಲಯದ ಗೋವಿಂದಗಿರಿ ಚೆಕ್ ಪೋಸ್ಟ್ ಬಳಿ ಇಂದು ಮಧ್ಯಾಹ್ನ 1-40ಗಂಟೆ ಸುಮಾರಿಗೆ ಚೆಕ್ ಪೋಸ್ಟ್ ಗೆ ನಿಯೋಜಿಸಲಾಗಿರುವ ಅಧಿಕಾರಿ ನೀಲಾನಾಯ್ಕ್ ಹಾಗೂ ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಮತ್ತು ಸಿಬ್ಬಂದಿ ತಪಾಸಣೆ ಮಾಡುವ ವೇಳೆ ಆತನ ಬ್ಯಾಗಿನಲ್ಲಿ 2,43,400ರೂ ನಗದು ಹಣ ದೊರೆತಿದ್ದು ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿ ಇಲ್ಲದ ಕಾರಣ ರಾಘವೇಂದ್ರನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ನಗದು ಹಣವನ್ನು ಜಪ್ತಿಮಾಡಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಚನ್ನಕೇಶವ
Previous Post Next Post

Contact Form

f="https://unpkg.com/video.js/dist/video-js.css" rel="stylesheet">