ಕಂಪ್ಲಿ-ನಮ್ಮ ವೈವಿಧ್ಯಮಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದುಮಾದಿಗ ದಂಡೋರ ಗಂಗಣ್ಣ ಅವರು ಹೇಳಿದರು.ಮಾನವತಾವಾದಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ .ಅಂಬೇಡ್ಕರ್ ಅವರ 132ನೇ ಜನ್ಮ ದಿನದ ಅಂಗವಾಗಿ ಎಂ.ಡಿ ಕ್ಯಾಂಪಿನಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿ ಕೇಕ್ ಕತ್ತರಿಸುವ ಮೂಲಕ ಅವರು ಸ್ಮರಿಸಿ ಗೌರವಿಸಿದರು ನಂತರ ಎಮ್ಮಿಗನೂರ ಪಂಪಾಪತಿ ಮಾತನಾಡಿ ಕೋಮು ದ್ವೇಷ ಮೂಲ ಭೂತವಾದ ಹೆಚ್ಚಾದಂತೆ ಅರಾಜಕತೆ ಸೃಷ್ಟಿಯಾಗುತ್ತದೆ ಡಾ.ಬಿ. ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಕಳೆದುಕೊಂಡರೆ ಗುಲಾಮರಂತೆ ಬದುಕ ಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದೇಶ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಕೋಮುವಾದ ಭಯೋತ್ಪಾದನೆ ಅಸಹಿಷ್ಣುತೆ ಸಾಂಸ್ಕೃತಿಕ ದಿವಾಳಿತನ ಹೆಚ್ಚಾಗುತ್ತಿದೆ ದಲಿತರ ಅಲ್ಪಸಂಖ್ಯಾತರ ಕ್ರೈಸ್ತರ ಸಮುದಾಯ ಅಭದ್ರತೆ ಎಲ್ಲಿ ತೋಳ ಲಾಡುತ್ತಿದೆ ಅಲ್ಪಸಂಖ್ಯಾತರಲ್ಲಿ ಭೀತಿ ಉಂಟುಮಾಡುವ ದೇಶದಲ್ಲಿ ಸರ್ಕಾರ ಅಸ್ತಿತ್ವದಲ್ಲಿಲ್ಲ ಎಂದೇ ಭಾವಿಸಬೇಕಾಗುತ್ತದೆ ಅಂಬೇಡ್ಕರ್ ಪ್ರತಿಮೆಗೆ ತಲೆಬಾಗಿ ನಮಸ್ಕರಿಸುವವರು ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಸಂವಿಧಾನ ಬದಲಾವಣೆ ಮಾಡುವ ಹುನ್ನಾರಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ ಇಂತಹ ಆಷಾಢ ಭೂತಿತನ ನಮಗೆ ಬೇಕಾಗಿಲ್ಲ ಇಂಥವರ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಸಂವಿಧಾನ ಬದಲಾವಣೆ ಮಾಡುವ ಮಾತುಗಳು ಜೋರಾಗುತ್ತಿವೆ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಪರ್ಯಾಯವಾಗಿ ಏನು ಕೊಡುತ್ತೀರಿ ಎಂಬುದರ ಬಗ್ಗೆ ಸ್ಪಷ್ಟಪಡಿಸಿ ಅಂತಹ ಪರ್ಯಾಯ ಸಂವಿಧಾನವನ್ನು ಮೊದಲು ಜನರ ಮುಂದಿಟ್ಟು ಚರ್ಚೆಗೆ ಅವಕಾಶ ಕಲ್ಪಿಸಬೇಕು ದ್ವೇಷದ ವಿಷ ಬೀಜ ಬಿತ್ತುವುದು ತಪ್ಪುಎಂದರು . ಈ ಸಂದರ್ಭದಲ್ಲಿ ಮುಖಂಡರಾದ ಹೊನ್ನುರಪ್ಪ,ಬುಜ್ಜಿಕುಮಾರ,ಲಕ್ಷ್ಮಣ,ರಾಜ,ಸಿ.ಬಸವರಾಜ್ ಯುವಕರು ಸೇರಿದಂತೆ ಅನೇಕರಿದ್ದರು.
ವರದಿ : ಚನ್ನಕೇಶವ
Tags
ಟಾಪ್ ನ್ಯೂಸ್