ಕಂಪ್ಲಿ, ಏ.14: ಪಟ್ಟಣದ ಅಂಬೇಡ್ಕರ್
ವೃತ್ತದಲ್ಲಿ ಕರ್ನಾಟಕ ಅಸ್ಪ್ರಶ್ಯರ
ವಿಮೋಚನೆ ಸಮಿತಿ ವತಿಯಿಂದ ಡಾ.
ಬಿ.ಆರ್.ಅಂಬೇಡ್ಕರ್‌ರವರ 132ನೇಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ
ಸಲ್ಲಿಸುವ ಮೂಲಕ ಶುಕ್ರವಾರ
ಆಚರಿಸಲಾಯಿತು. ಕರ್ನಾಟಕ ಅಸ್ಪ್ರಶ್ಯರ ವಿಮೋಚನೆ
ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಲಕ್ಷ್ಮಣ
ಮಾತನಾಡಿ, ಶೋಷಿತ ಹಾಗೂ ದುರ್ಬಲ ವರ್ಗದವರಿಗೆ ಹಕ್ಕುಗಳನ್ನುನೀಡಿದ
ಶ್ರೇಯಸ್ಸು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ
ಸಲ್ಲುತ್ತದೆ. ಅಂಬೇಡ್ಕರ್ ಅವರು ಸಾಮಾಜಿಕ
ಸಮಾನತೆಗಾಗಿ ಹೋರಾಡಿದ ಮಹಾನ್
ನಾಯಕ. ನೊಂದವರ, ದೀನದಲಿತರ
ಬದುಕು ಬೆಳಗಿಸಿದ ಸೂರ್ಯ. ಅವರ
ಆದರ್ಶಗಳನ್ನು ಜೀವನದಲ್ಲಿ ಮೈಗೂಡಿ
ಸಿಕೊಳ್ಳುವ ಮೂಲಕ ಉತ್ತಮ ಸಮಾಜ
ಕಟ್ಟೋಣ ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಎನ್.ಬುಜ್ಜಿಕುಮಾರ್ ಹಾಗೂ ಪಂಪಾಪತಿ ಎಮ್ಮಿಗನೂರ ಮಾತನಾಡಿ,
ಮನುಷ್ಯ ಚಿರಂಜೀವಿಯಾಗಲಾರ. ಆದರೆ, ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಗಿಡಕ್ಕೆ ನೀರು ಎಷ್ಟು ಮುಖ್ಯವೋ ಅದೇ ರೀತಿಯಾಗಿ
ಒಂದು ಚಿಂತನೆಯು ಸಮಾಜದಲ್ಲಿ ಪ್ರಸರಣವಾಗುವುದು ನಮಗೆ ಕೂಡ ಅಷ್ಟೇ ಮುಖ್ಯ.
ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜೀವನ,
ಧೈಯಗಳು,ಆದರ್ಶವಾಗಬೇಕು. ಅವು ಅದಮ್ಯ
ಚೇತನಗಳೂ ಆಗಿವೆ. ಇದನ್ನು ಯುವ
ಪೀಳಿಗೆ ಅರಿತುಕೊಂಡು ಆದರ್ಶ ಪಥದಲ್ಲಿ
ನಡೆಯಬೇಕು ಎಂದರು. ಈ ಸಂದರ್ಭದಲ್ಲಿ
ಪುರಸಭೆ ಸದಸ್ಯರಾದ ಎನ್.ರಾಮಾಂಜಿನೀಯಲು,
ಮುಖಂಡರಾದ ರಾಜುನಾಯಕ,ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಎಂ.ಸಿ.ಮಾಯಪ್ಪ, ಜಿ.ರಾಮಣ್ಣ, ಮಲ್ಲಿಕಾರ್ಜುನ, ಗಂಗಣ್ಣ, ರಾಜ, ಬಾಬು,ಬಿ.ಕೆ.ವಿರುಪಾಕ್ಷಿ,ಸಿ.ಬಸವರಾಜ್,ತಿಪ್ಪೇಸ್ವಾಮಿ,ಸೂರ್ಯನಾರಯಣ,ಹೊನ್ನುರಪ್ಪ,ಜಿಲಾನ್,ಹಬೀಬ್ ರೆಹಮಾನ್,ಡಿಶ್ ಪ್ರಸಾದ್, ಕೆ.ರಾಜು,ಹುಲಗಪ್ಪ,ಯಲ್ಲಪ್ಪ,ಮರಿಯಪ್ಪನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಚನ್ನಕೇಶವ
Tags
ಟಾಪ್ ನ್ಯೂಸ್