ಸಣಾಪುರ ಗ್ರಾಪಂಯ ನೂತನ ಉಪಾಧ್ಯಕ್ಷರಾಗಿ ಜ್ಯೋತಿ ಅವಿರೋಧ ಆಯ್ಕೆ
ಕಂಪ್ಲಿ:ಮಾ.11. ತಾಲೂಕಿನ ಸಣಾಪುರ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಜ್ಯೋತಿ ಅವರು ಅವಿರೋಧವಾಗಿ ಆಯ್ಕೆಗೊಂಡರು.
ಇಲ್ಲಿನ ಕಛೇರಿಯಲ್ಲಿ ಹಿಂದಿನ ಉಪಾಧ್ಯಕ್ಷ ಲಕ್ಷ್ಮಿ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ ಹಿನ್ನಲೆ ಜ್ಯೋತಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಕೆ.ಎಸ್.ಮಲ್ಲನಗೌಡ ಘೋಷಿಸಿದ ನಂತರ ಮಾತನಾಡಿ, ಸರ್ವ ಸದಸ್ಯರ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಗ್ರಾಪಂಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಚುನಾವಣೆ ಪ್ರಕ್ರಿಯೆಯಲ್ಲಿ ತಾಪಂ ಸಿಬ್ಬಂದಿ ಸುರೇಶ್ ಭಂಡಾರಿ, ಸುರೇಶ,ಪಿಡಿಒ ಶೇಷಗಿರಿ, ಕಾರ್ಯದರ್ಶಿ ಕೆ.ದೊಡ್ಡಬಸಪ್ಪ,ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಸದಸ್ಯರಾದ ವೀರನಗೌಡರೆಡ್ಡಿ,ಬಸವರಾಜ್ ಕುರುಗೋಡು,ಕೆ.ಭಾರತಿ,ನಾಗಮ್ಮ,ರಮಣಯ್ಯ ,ಅರ್.ಕೆ.ಗವಿಸಿದ್ದಪ್ಪ,ರತ್ನಮ್ಮಾಗೆದಾಳ್,ಗೂಳಮ್ಮಕುರುಗೋಡು,ಈರಮ್ಮವಡ್ಡರ,ಕೆ.ಭಾಸ್ಕರ್ ರೆಡ್ಡಿ,ಲಕ್ಷ್ಮಿದೇವಿ,ವೆಂಕಟೇಶ,ಕೆ.ಸಂಧ್ಯಾಗಾಯತ್ರಿ,ಜ್ಯೋತಿ,ಇದ್ದರು. ನಂತರ ತಾಪಂ, ಗ್ರಾಪಂ ಹಾಗೂ ಗ್ರಾಮದ ಮುಖಂಡರು ನೂತನ ಉಪಾಧ್ಯಕ್ಷೆ ಜ್ಯೋತಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಕೋಟೆಶ್ವರರಾವ,ಸಿದ್ದಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಚನ್ನಕೇಶವ