Koppal : ಸಂಗಣ್ಣ ಕರಡಿ ಅಭಿಮಾನಿಗಳ ಹಿತೈಷಿಗಳ ಸಭೆ-ಯಾವುದೇ ತೀರ್ಮಾನವಿಲ್ಲ


ಸಂಗಣ್ಣ ಕರಡಿ ಅಭಿಮಾನಿಗಳ ಹಿತೈಷಿಗಳ ಸಭೆ-ಯಾವುದೇ ತೀರ್ಮಾನವಿಲ್ಲ

ಕಾದು ನೋಡಲು ಸಂಗಣ್ಣ ಕರಡಿ ನಿರ್ಧಾರ

ಕೊಪ್ಪಳ,: ವಿಧಾನಸಭಾ ಕೊಪ್ಪಳ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲು ಪಕ್ಷದ ವರಿಷ್ಠರು ಹಿಂದೇಟು ಹಾಕಿದ ಹಿನ್ನೆಲೆ ಸಂಸದ ಸಂಗಣ್ಣ ಕರಡಿ ಅವರು ನಗರದ ಕಿನ್ನಾಳ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸಭೆ ಆರಂಭವಾಗುವ ಮುಂಚೆ  ಸಂಸದ ಸಂಗಣ್ಣ ಕರಡಿ ಅವರನ್ನು ಅಭಿಮಾನಿಗಳು ಹೊತ್ತುಕೊಂಡು ವೇದಿಕೆಗೆ ಕರೆ ತಂದರು.

ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅವರ ಬೆಂಬಲಿಗರು, ಮುಖಂಡರು ಹಾಗೂ ಹಿತೈಷಿಗಳು ಬಿಜೆಪಿ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷ ಜಿಲ್ಲೆಯಲ್ಲಿ ಗಟ್ಟಿಯಾಗುತ್ತದೆ. ಬಿಜೆಪಿ ಕೊಪ್ಪಳದಲ್ಲಿ ಗೆಲ್ಲುತ್ತದೆ ಎಂದರು. ಮುಂದಿನ ಶಾಸಕ ಸಂಗಣ್ಣ ಕರಡಿ ಅವರಿಗೆ ಜೈ ಎಂದು ಘೋಷಣೆಗಳನ್ನು ಕೂಗಿದರು.

ಸಭೆ ನಡೆಯುವಾಗಲೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪೋನ್ ಕರೆ ಮಾಡಿ ಕಾದು ನೋಡಿ ಎಂದು ಸಂಗಣ್ಣ ಅವರಿಗೆ ಸಲಹೆ ನೀಡಿದರು. 

ರಾತ್ರಿ ತನಕ ಕಾಯಬೇಕು. ಬಳಿಕ ಪಕ್ಷದ ನಿರ್ಧಾರ ತಿಳಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹಾಗೂ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎಂದು ಸಂಸದರ ಆಪ್ತರು ತಿಳಿಸಿದ್ದಾರೆ. ಇದೇ ವೇಳೆ ಅನೇಕ  ಕಾರ್ಯಕರ್ತರು, ಮುಖಂಡರು ಬಿಜೆಪಿ ಬಿಡಿ, ಜೆಡಿಎಸ್ ಗೆ ಜೈ ಎನ್ನುವ ಘೋಷಣೆ ಕೂಗಿದರು. ಈ ಹಿಂದೆ ಸಂಗಣ್ಣ ಅವರು ಜೆಡಿಎಸ್ ನಿಂದ ಗೆದ್ದು ಎರಡು ಭಾರಿ ಶಾಸಕರಾಗಿದ್ದರು ಎಂಬುದು ವಿಶೇಷ. ಅನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿ ಶಾಸಕರು, ಸಂಸದರು ಆಗಿದ್ದರು. ಸಂಗಣ್ಣ ಕರಡಿ ಅವರು ಈಗ ಮತ್ತೆ ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರೆ. ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಇನ್ನೂ ಅನೇಕರು ಇದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">