ಹೊಲಗಳಿಗೆ ದಾರಿ ಕೊಡಿ ಇಲ್ಲವಾದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ
ತುರ್ವಿಹಾಳ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ಕೆರೆ ಹತ್ತಿರ ಸುಮಾರು 400ಎಕರೆ ಭೂಮಿಗೆ ರಸ್ತೆ ಇಲ್ಲದಂತಾಗಿದ್ದು ಕಳೆದ 10ವರ್ಷಗಳಿಂದ ರಸ್ತೆ ಇಲ್ಲದೇ ರೈತರು ಪರದಾಡುತ್ತಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿಮಾಡಿದರೂ ಸಹ ಯಾವಬ್ಬ ಅಧಿಕಾರಿ ಇತ್ತಕಡೆ ಗಮನ ಹರಿಸುತ್ತಿಲ್ಲ ರೈತರ ಪಾಡು ಅಯೋ ಮಯ ಸ್ಥಿತಿಯಲ್ಲಿದೆ.
ಏಕೆಂದರೇ ಅಲ್ಲಿರುವ ಪ್ರತಿಯೊಬ್ಬ ರೈತನಿಗೆ ಕೇವಲ 2 ರಿಂದ 3 ಎಕರೆ ಜಮೀನು ಇದ್ದು ಉಳುಮೆ ಮಾಡದಂತಹ ಪರಸ್ಥಿತಿ ಉದ್ಭವವಾಗಿದೆ.
ಈ ವೇಳೆ ಮಾತನಾಡಿದ ಮರಿಸ್ವಾಮಿ ಕೆರೆ ನಿರ್ಮಾಣದ ಸಂದರ್ಭದಲ್ಲಿ ನಾವು ಅಧಿಕಾರಿಗಳ ಗಮನಕ್ಕೆ ತಂದರು ತಮ್ಮ ಕೆಲಸದ ಹೊತ್ತಿನಲ್ಲಿ ಭರವಸೆ ನೀಡಿ ಹಾಗೆ ನುಣಿಚಿಕೊಂಡಿದ್ದಾರೆ. ರೈತಾಪಿ ಕುಟುಂಬಗಳು ತಮ್ಮ ಜಮೀನನ್ನು ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಕೆರೆಯ ಪಕ್ಕದಲ್ಲಿರುವ ಹೊಲಗಳಲ್ಲಿ ಉಪ್ಪಿನ ಅಂಶ ಬಂದಿದ್ದು ಬೆಳೆ ಬೆಳೆಯಲು ಅಸಾಧ್ಯ ಪರಿಸ್ಥಿತಿ ಎದುರಾಗಿದೆ ಇದರ ಬಗ್ಗೆ ಹಲವು ಬಾರಿ ತಹಶೀಲ್ದಾರ್ ಗೆ ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರು ಅಧಿಕಾರಿಗಳು ಯಾವುದೇ ರೀತಿಯಿಂದ ಸ್ಪಂದಿಸದೆ ಬೇಜವಾಬ್ದಾರಿ ಮೆರೆದಿದಿದ್ದಾರೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹೊಲಗಳಿಗೆ ಹೋಗಲು ದಾರಿ ವ್ಯವಸ್ಥೆ ಮಾಡಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಚುನಾವಣೆ ಬಹಿಷ್ಕರಿಸುತ್ತೆವೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಳಪ್ಪ ಬಡಿಗೇರ್, ಬಸವರಾಜ್ ಸಜ್ಜಿಹೊಲ, ಖಾದರ್ ಸಾಬ್, ಶಂಕರ್ ನಾಯಕ್, ಗೋವಿಂದಪ್ಪಮಂತ್ರಿ, ಹುಚ್ಚಪ್ಪ ಆನೆಗುಂದಿ, ಬಸವರಾಜ್ ಬುದ್ದಿನಿ, ಯಲ್ಲಪ್ಪ ಆನೆಗುಂದಿ ಮತ್ತು ದಲಿತ ಮುಖಂಡರಾದ ಶಿವಪುತ್ರಪ್ಪ, ವಿಜಯಕುಮಾರ್ ಇನ್ನಿತರರಿದ್ದರು.
ವರದಿ : ಮೆಹಬೂಬ್ ಮೊಮಿನ್
Tags
ರಾಜ್ಯ