Koppal : ಆಕಸ್ಮಿಕ ಬೆಂಕಿಗೆ ಮೂರು ಅಂಗಡಿ ಭಸ್ಮ: ಅಮರೇಶ ಕರಡಿ ಭೇಟಿ

ಆಕಸ್ಮಿಕ ಬೆಂಕಿಗೆ ಮೂರು ಅಂಗಡಿ ಭಸ್ಮ: ಅಮರೇಶ ಕರಡಿ ಭೇಟಿ

ಕೊಪ್ಪಳ,: ನಗರದ ಗವಿಮಠದ ಹತ್ತಿರವಿರುವ ಹಾಲವರ್ತಿ ರಸ್ತೆಯಲ್ಲಿರುವ ಪಂಚರ್ ಶಾಪ್, ಗ್ಯಾರೇಜ್ ಹಾಗೂ ಹೋಟೆಲ್‌ಗೆ ಆಕಸ್ಮಿಕ ವಿದ್ಯುತ್ ತಗಲಿ ಹಾನಿ ಆಗಿದ್ದು ಶುಕ್ರವಾರ ಸಂಜೆ ಬಿಜೆಪಿ ಮುಖಂಡ ಅಮರೇಶ ಕರಡಿ ಭೇಟಿ ನೀಡಿ ಪರಿಶೀಲಿಸಿದರು. 
ಸ್ಥಳೀಯರಿಂದ ಆಕಸ್ಮಿಕ ಬೆಂಕಿ ಅನಾಹುತ ಕುರಿತು ಮಾಹಿತಿ ಪಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರ್ ಶಾಪ್, ಗ್ಯಾರೇಜ್, ಹೋಟೆಲ್ ಸೇರಿ ಮೂರು ಅಂಗಡಿಗಳಿಗೆ ಬೆಂಕಿ ತಗುಲಿದ್ದು, ಪರಿಹಾರ ಕುರಿತು ತಹಸೀಲ್ದಾರಗೆ ಕರೆ ಮಾಡಿ ತಿಳಿಸಿದ್ದೇನೆ. ಮುಖ್ಯಮಂತ್ರಿ ಪರಿಹಾರ ನಿಧಿ ಯೋಜನೆಯಡಿ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಕುಟುಂಬಸ್ಥರೊಂದಿಗೆ ಚರ್ಚೆ: ಪಂಚರ್ ಶಾಪ್, ಗ್ಯಾರೇಜ್ ಹಾಗೂ ಹೋಟೆಲ್ ಮಾಲೀಕರೊಂದಿಗೆ ಚರ್ಚೆ ನಡಿಸಿದ ಅಮರೇಶ್ ಕರಡಿ ಅವರು, ಸರ್ಕಾರದಿಂದ ನೀಡಲಾಗುವ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ವರದಿ : ಶಿವಕುಮಾರ ಹಿರೇಮಠ
Previous Post Next Post

Contact Form

f="https://unpkg.com/video.js/dist/video-js.css" rel="stylesheet">