Koppal : ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ: ರಾಘವೇಂದ್ರ ಹಿಟ್ನಾಳ

ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ: ರಾಘವೇಂದ್ರ ಹಿಟ್ನಾಳ

ಸೋಮವಾರ ಏ.17 ರಂದು ನಾಮಪತ್ರ ಸಲ್ಲಿಕೆ

ಕೊಪ್ಪಳ,: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ವಿಶ್ವಾಸ ಬಂದಿದ್ದು ಕಾಂಗ್ರೆಸ್ ಪಕ್ಷವನ್ನ ಆಡಳಿತರಕ್ಕೆ ತರಲು ರಾಜ್ಯದ ಜನತೆ ತೀರ್ಮಾನ ಮಾಡಿದ್ದಾರೆ. ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿರುವ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ರವಿವಾರ ಅವರು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಹಾಗೂ ಕಾರ್ಯಕರ್ತರ ಸಭೆಯನ್ನ ನಡೆಸಿ ಮಾತನಾಡಿದರು. ನಿಮ್ಮೆಲ್ಲರ ಉತ್ಸಾಹವನ್ನ ನೋಡುತ್ತಿದ್ದರೆ ಕಳೆದ ಎರಡು ಚುನಾವಣೆಗಿಂತ ಈ ಚುನಾವಣೆಯಲ್ಲೀ ಹೆಚ್ಚಿನ ಲೀಡ್ ನಲ್ಲಿ ಗೆಲ್ಲುವ ಹಿಂಗಿತವನ್ನ ಸೇರಿದ್ದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಹಾಗೂ ಕಾರ್ಯಕರ್ತರಲ್ಲಿ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇರ್ಪಡೆ ಆಗುವರ ಸಂಖ್ಯೆ ಹೆಚ್ಚಳ : ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ.ಇಂದು 300ಕ್ಕೂ ಅಧಿಕ ಜನ ವಿವಿಧ ಪಕ್ಷಗಳನ್ನ ತೊರೆದು ಕಾಂಗ್ರೆಸ್ ಸೇರ್ಪಡೆ ಆದರು.ಸೋಮವಾರ ಏ.17 ರಂದು ನಾಮಪತ್ರ ಸಲ್ಲಿಕೆ: ಕೊಪ್ಪಳ ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಕೆ.ರಾಘವೇಂದ್ರ ಹಿಟ್ನಾಳ ಅವರು  ಸೋಮುವಾರ ನಾಮಪತ್ರ ಸಲ್ಲಿಸುತ್ತಿದ್ದಾರೆ. ಸಿರಸಪ್ಪಯ್ಯ ಮಠದಿಂದ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಆಗಮಿಸಿ ನಂತರ ನಾಮಪತ್ರ ಸಲ್ಲಿಸಲ್ಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ಗ್ರಾಮೀಣ ಬ್ಲಾಕ್ ಕೃಷ್ಣರೆಡ್ಡಿ, ಮುಖಂಡರಾದ ಪ್ರಸನ್ನ ಗಡಾದ, ಸುರೇಶ ದೇಸಾಯಿ,ಶರಣಪ್ಪ ಸಜ್ಜನ, ಅಮ್ಜದ ಪಟೇಲ, ಮಹೇಂದ್ರ ಚೋಪ್ರಾ, ಮುತ್ತುರಾಜ್ ಕುಷ್ಟಗಿ, ವಿರೂಪಾಕ್ಷಪ್ಪ ಮೋರ್ನಾಳ, ಅರುಣ ಅಪ್ಪುಶೆಟ್ಟಿ, ಕೆ.ಎಂ.ಸಯ್ಯದ್, ಕತೀಬ್ ಬಾಷು, ಮಾನ್ವಿ ಪಾಷ, ಪರಶುರಾಮ ಕೆರೆಹಳ್ಳಿ, ಇಂದಿರಾ ಬಾವಿಕಟ್ಟಿ, ಕಿಶೋರಿ ಬೂದ್ನೂರು, ಜ್ಯೋತಿ ಗೊಂಡಬಾಳ, ವಕ್ತಾರ ಕುರಗೋಡ ರವಿ ಸೇರಿದಂತೆ ಅನೇಕರು ಇದ್ದರು.

ವರದಿ : ಶಿವಕುಮಾರ ಹಿರೇಮಠ
Previous Post Next Post

Contact Form

f="https://unpkg.com/video.js/dist/video-js.css" rel="stylesheet">